ಕರ್ನಾಟಕ

karnataka

ETV Bharat / sitara

'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್​​ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ ..! - Santosh Anandram yuvaratna

ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನನಗೆ 10 ಬಾರಿಯಾದರೂ ಸೀನುವ ಅಭ್ಯಾಸ ಇದೆ. ಒಂದು ವೇಳೆ ವಿದೇಶದಲ್ಲಿ ನಾನು ಸೀನುವುದನ್ನು ನೋಡಿ ನನ್ನನ್ನು ಕ್ವಾರಂಟೈನ್​​ಗೆ ಕರೆದೊಯ್ಯುತ್ತಾರೆ ಎಂಬ ಭಯದಿಂದ ಸ್ಪೇನ್ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಬೇಕಾಯ್ತು ಎಂದು ಪುನೀತ್ ರಾಜ್​ಕುಮಾರ್ ಹೇಳಿದ್ದಾರೆ.

Yuvaratna Spain shoot cancel
'ಯುವರತ್ನ'

By

Published : Sep 8, 2020, 1:59 PM IST

ಸಂತೋಷ್ ಆನಂದ್ ರಾಮ್​​ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟಿಸಿರುವ 'ಯುವರತ್ನ' ಚಿತ್ರದ ಹಾಡುಗಳ ಶೂಟಿಂಗ್ ಬಾಕಿ ಉಳಿದಿದ್ದು ಇದೇ ತಿಂಗಳ 20 ರಂದು ಬಾಕಿ ಇರುವ ಚಿತ್ರೀಕರಣ ಮತ್ತೆ ಆರಂಭವಾಗಲಿದೆ.

ಹಾಡುಗಳ ಚಿತ್ರೀಕರಣಕ್ಕಾಗಿ ಯುವರತ್ನ ಚಿತ್ರತಂಡ ಸ್ಪೇನ್​​​​ಗೆ ತೆರಳಲು ನಿರ್ಧರಿಸಿತ್ತು. ಆದರೆ ಅಷ್ಟರಲ್ಲಾಗಲೇ ಕೊರೊನಾ ಭೀತಿ​​ ಆರಂಭವಾಗಿತ್ತು. ಈ ನಡುವೆಯೂ ಪುನೀತ್ ರಾಜ್​ಕುಮಾರ್ ಸ್ಪೇನ್​​​ಗೆ ಹೋಗಲು ರೆಡಿ ಇದ್ದರಂತೆ. ಆದರೆ ಒಂದೇ ಒಂದು ಕಾರಣದಿಂದ ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿದ್ರಂತೆ ಪುನೀತ್. ಇತ್ತೀಚೆಗೆ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ವಿತ್ ಸೃಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ಈ ಇಂಟ್ರಸ್ಟಿಂಗ್ ವಿಚಾರವನ್ನು ಹೇಳಿಕೊಂಡಿದ್ದಾರೆ.

'ಯುವರತ್ನ'

'ಆಗಿನ್ನೂ ಒಂದೊಂದಾಗಿ ಕೊರೊನಾ ಪ್ರಕರಣ ಕೇಳಿಬರುತ್ತಿತ್ತು. ಎಲ್ಲಾ ಮುಂಜಾಗ್ರತೆ ವಹಿಸಿಕೊಂಡು ಸ್ಪೇನ್​​ಗೆ ಹೋಗಿ ಶೂಟಿಂಗ್ ಮಾಡಿ ಬರೋಣ ಎಂದು ನಾನೇ ಚಿತ್ರತಂಡಕ್ಕೆ ಹೇಳಿದ್ದೆ. ಈ ವಿಚಾರವಾಗಿ ಪತ್ನಿ ಅಶ್ವಿನಿಗೂ ತಿಳಿಸಿದ್ದೆ. ಆದರೆ ಸೀನುವುದು, ಕೆಮ್ಮುವುದು, ನೆಗಡಿ ಎಲ್ಲಾ ಕೊರೊನಾ ಲಕ್ಷಣ ಎಂಬ ಮಾಹಿತಿ ನನಗೆ ದೊರೆಯಿತು. ಆ ಸಮಯದಲ್ಲಿ ಯಾರಾದರೂ ಸೀನಿದರೆ, ಕೆಮ್ಮಿದರೆ ಅಂತವರನ್ನು ಕ್ವಾರಂಟೈನ್​​ನಲ್ಲಿ ಇರಿಸುತ್ತಿದ್ದಾರೆ ಎಂಬ ವಿಚಾರ ಕೂಡಾ ತಿಳಿದುಬಂತು. ನನಗೆ ಭಯ ಶುರುವಾಗಿದ್ದು ಅಲ್ಲೇ.

ನಾನು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ 10 ಬಾರಿಯಾದರೂ ಸೀನುತ್ತೇನೆ. ನನಗೆ ಇದು ಚಿಕ್ಕಂದಿನಿಂದ ಅಭ್ಯಾಸ ಆಗಿ ಹೋಗಿದೆ. ಒಂದು ವೇಳೆ ನಾನು ವಿದೇಶಕ್ಕೆ ಶೂಟಿಂಗ್ ಹೋಗಿ ಬೆಳಗ್ಗೆ ನಾನು ಸೀನುವುದನ್ನು ಅಲ್ಲಿ ಯಾರಾದರೂ ನೋಡಿ ನನ್ನನ್ನು ಕ್ವಾರಂಟೈನ್​​ಗೆ ಎಳೆದೊಯ್ದರೆ ಕಷ್ಟ ಎಂದು ಭಯಪಟ್ಟು, ವಿದೇಶಕ್ಕೆ ಹೋಗುವ ಸಹವಾಸವೇ ಬೇಡ ಎಂದು ಶೂಟಿಂಗ್ ಕ್ಯಾನ್ಸಲ್ ಮಾಡಿದ ವಿಚಾರವನ್ನು ಪುನೀತ್ ಹೇಳಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್​​ ತಯಾರಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಇಂಟ್ರೊಡ್ಯೂಸ್ಡ್​​ ಸಾಂಗನ್ನು ಚಿತ್ರೀಕರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜಾನಿ ಮಾಸ್ಟರ್​​ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ABOUT THE AUTHOR

...view details