ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ.
ಪವರ್ ಸ್ಟಾರ್ ಹುಟ್ಟುಹಬ್ಬ ಆಚರಿಸಲು ಸಜ್ಜಾದ ಅಭಿಮಾನಿಗಳು - ಪವರ್ ಸ್ಟಾರ್ ಬರ್ತಡೇ
ಮಾರ್ಚ್ 17 ರಂದು ಪುನಿತ್ ರಾಜ್ಕುಮಾರ್ ಹುಟ್ಟುಹಬ್ಬವಾಗಿದ್ದು ಅಭಿಮಾನಿಗಳು ಪವರ್ ಸ್ಟಾರ್ ಬರ್ತಡೇ ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕಾಗಿ ಪುನೀತ್ ಅವರ ಕಾಮನ್ ಡಿಪಿಯನ್ನು ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ.
ಮಾರ್ಚ್ 17 ರಂದು ಅಪ್ಪು ಹುಟ್ಟಿದ ದಿನ. ಅಷ್ಟರಲ್ಲೇ ರಾಜರತ್ನೋತ್ಸವ ಹೆಸರಲ್ಲಿ ಅಭಿಮಾನಿಗಳು ಈ ಯುವರತ್ನನ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬರ್ತಡೇ ಕುರಿತಂತೆ ಪೋಸ್ಟ್ಗಳು ಮತ್ತು ಕಾಮನ್ ಡಿಪಿ ರೆಡಿಯಾಗಿದೆ. ಅಭಿಮಾನಿಗಳು ಈ ರಾಜಕುಮಾರನ ಬರ್ತಡೇಗೆ ಸಖತ್ ಸಿಂಪಲ್ ಹಾಗೂ ಸ್ಟೈಲಿಷ್ ಆಗಿರುವ ಕಾಮನ್ ಡಿಪಿಯನ್ನು ರಿವೀಲ್ ಮಾಡಿದ್ದಾರೆ.
ಸದ್ಯ ಪುನೀತ್ ನಟಿಸಿರುವ ನಟಸಾರ್ವಭೌಮ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇನ್ನೆರಡು ವಾರಗಳಲ್ಲಿ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಚಿತ್ರತಂಡದವರು ಕೂಡಾ ವಿಶೇಷ ಗಿಫ್ಟ್ ನೀಡುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ಪುನೀತ್ ಹುಟ್ಟುಹಬ್ಬಕ್ಕೆಂದೇ ಹಾಡೊಂದನ್ನು ಬರೆದಿದ್ದು, ಆ ಹಾಡನ್ನು ಮಾರ್ಚ್ 16ರ ಮಧ್ಯರಾತ್ರಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.