'ನಾನು ಪುನೀತ್ ಮಾತಾಡ್ತಾ ಇದ್ದೀನಿ. ನಿಮ್ಮ ಅಭಿನಯದ ‘ದಿಯಾ’ ಚಿತ್ರ ಬಹಳ ಸೊಗಸಾಗಿತ್ತು. ಅಭಿನಂದನೆ ಹೇಳಲು ಫೋನ್ ಮಾಡಿದೆ. ಹಾಂ, ಕೊರೊನಾ ವೈರಸ್ ಹಾವಳಿ ಮುಗಿದ ಮೇಲೆ ಬೆಂಗಳೂರಿಗೆ ಬನ್ನಿ. ಹಾಗೇನೇ, ನಮ್ಮ ಪ್ರಾಜೆಕ್ಟ್ನಲ್ಲಿ ನೀವು ಭಾಗಿ ಆಗಿ..!' ಎಂದು ಹೇಳುತ್ತಿದ್ದಂತೆ ಪೃಥ್ವಿ ಅಂಬರ್ ಫುಲ್ ಥ್ರಿಲ್ ಆಗಿದ್ದರಂತೆ.
ಹೌದು, ವಿಭಿನ್ನ ಕಥಾ ಹಂದರ ಹೊಂದಿರುವ ದಿಯಾ ಚಿತ್ರದ ಜನಪ್ರೀಯತೆಯೇ ಇದಕ್ಕೆ ಕಾರಣ. ಚಿತ್ರ ನೋಡಿರುವ ಸ್ಯಾಂಡಲ್ ವುಡ್ ಯುವರಾಜ ತುಳು ನಟನಿಗೆ ಕರೆ ಮಾಡಿದ್ದಾರೆ.
ಹೊಸ ಪ್ರತಿಭೆಗಳಿಗೆ ಆಹ್ವಾನ ಹಾಗೂ ಮನ್ನಣೆ ಸಿಗಲೆಂದು ಪಿಆರ್ಕೆ ಪ್ರೊಡಕ್ಷನ್ ಶುರು ಮಾಡಿರುವುದಾಗಿ ನಟ ಪುನೀತ್ ರಾಜ್ ಕುಮಾರ್ ಅನೇಕ ಬಾರಿ ಹೇಳಿದ್ದರು. ಈ ಮಾತಿಗೆ ತಪ್ಪದ ರೀತಿಯಲ್ಲಿ ಪವರ್ ಸ್ಟಾರ್ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಬ್ಯಾನರ್‌ನಡಿ ಪ್ರತಿಭಾವಂತ ನಟ, ನಟಿಯರ ಪ್ರತಿಭೆಗೆ ನೀರೆರೆಯುವ ಮಹತ್ವಪೂರ್ಣ ಕೆಲಸವನ್ನು ಅವರು ಮಾಡುತ್ತಿದ್ದಾರೆ.