ಕರ್ನಾಟಕ

karnataka

By

Published : Nov 2, 2019, 6:33 PM IST

ETV Bharat / sitara

ಯುವರತ್ನ, ಜೇಮ್ಸ್​​ ಚಿತ್ರಗಳ ಬಗ್ಗೆ ಪುನೀತ್ ರಾಜ್​​ಕುಮಾರ್ ಏನು ಹೇಳಿದ್ರು?

'ಜೇಮ್ಸ್' ಚಿತ್ರದ ಬಗ್ಗೆ ಮಾತನಾಡಿದ ಪುನೀತ್​, ಡಿಸೆಂಬರ್​ ಕೊನೆಯ ವಾರ ಅಥವಾ ಜನವರಿಯಲ್ಲಿ 'ಜೇಮ್ಸ್​​​' ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ​​​

ಪುನೀತ್ ರಾಜ್​​ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಸದ್ಯಕ್ಕೆ 'ಯುವರತ್ನ' ಚಿತ್ರದ ಶೂಟಿಂಗ್​​​​​​​ನಲ್ಲಿ ಬ್ಯುಸಿಯಾಗಿದ್ದಾರೆ. 'ಯುವರತ್ನ' ಟೀಸರ್ ನೋಡಿ ಥ್ರಿಲ್ ಆಗಿರುವ ಅಭಿಮಾನಿಗಳು ಸಿನಿಮಾಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಯುವರತ್ನ, ಜೇಮ್ಸ್ ಚಿತ್ರದ ಬಗ್ಗೆ ಪುನೀತ್ ಮಾತು

ಚಿತ್ರವೊಂದರ ಮುಹೂರ್ತ ಸಮಾರಂಭಕ್ಕೆ ಅತಿಥಿ ಆಗಿ ಆಗಮಿಸಿದ್ದ ಪುನೀತ್ ರಾಜ್​​ಕುಮಾರ್, 'ಯುವರತ್ನ' ಚಿತ್ರದ ಬಗ್ಗೆ ಮಾತನಾಡಿದರು. ಜೊತೆಗೆ ತಮ್ಮ ಮುಂದಿನ ಚಿತ್ರ 'ಜೇಮ್ಸ್​​​' ಬಗ್ಗೆ ಕೂಡಾ ಪುನೀತ್​​ ಮಾತನಾಡಿದ್ದಾರೆ. 'ಯುವರತ್ನ' ಚಿತ್ರದ ಶೂಟಿಂಗ್ ಶೇಕಡಾ 65ರಷ್ಟು ಮುಗಿದಿದ್ದು, ಇನ್ನು ಶೇಕಡಾ 35 ಭಾಗವಷ್ಟೇ ಬಾಕಿ ಇದೆ. ಇನ್ನು 'ಮಾಯಾ ಬಜಾರ್​​' ಸಿನಿಮಾದ ಪ್ರಮೋಷನಲ್​ ಹಾಡಿನಲ್ಲಿ ಕೂಡಾ ನಾನು ಸ್ಟೆಪ್​​ ಹಾಕಿದ್ದು, ಆ ಸಿನಿಮಾ ಕೂಡಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದರು. 'ಜೇಮ್ಸ್' ಚಿತ್ರದ ಬಗ್ಗೆ ಮಾತನಾಡಿದ ಪುನೀತ್​, ಡಿಸೆಂಬರ್​ ಕೊನೆಯ ವಾರ ಅಥವಾ ಜನವರಿಯಲ್ಲಿ 'ಜೇಮ್ಸ್​​​' ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ​​​ಅಲ್ಲದೆ ಇತ್ತೀಚೆಗೆ ತಾವು ಸ್ಟಂಟ್ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಪುನೀತ್​​​​​, ನಾನು ಸಿನಿಮಾಗಷ್ಟೇ ಸ್ಟಂಟ್ ಅಭ್ಯಾಸ ಮಾಡುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಸ್ಟಂಟ್ ಪ್ರಾಕ್ಟೀಸ್ ಮಾಡುತ್ತೇನೆ ಎಂದರು.

ABOUT THE AUTHOR

...view details