ಕರ್ನಾಟಕದಲ್ಲಿ ಮಹಾಮಾರಿ ಕೊರೊನಾ 2ನೇ ಅಲೆ ಹಿನ್ನೆಲೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯಾದ್ಯಾಂತ ಜಿಮ್, ಸ್ವಿಮ್ಮಿಂಗ್ ಪೂಲ್‌ಗಳನ್ನ ಬಂದ್ ಮಾಡಲಾಗಿದೆ.
ಅಲ್ಲದೆ ಚಿತ್ರಮಂದಿರಗಳು ಶೇ.50ರಷ್ಟು ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಈ ನಿಯಮದ ವಿರುದ್ಧ ನಟ ಪುನೀತ್ ರಾಜ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಕೊರೊನಾ ನೀತಿ ಕುರಿತು ಪುನೀತ್ ರಾಜ್‍ಕುಮಾರ್ ಬೇಸರ ಯುವರತ್ನ ಸಿನಿಮಾ ರಿಲೀಸ್ ಆಗಿ ಎಲ್ಲಾ ಕಡೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿರುವ ಕಾರಣದಿಂದ, ಪುನೀತ್ ರಾಜ್‍ಕುಮಾರ್ ತಮ್ಮ ಫೇಸ್ಬುಕ್ನಲ್ಲಿ ಲೈವ್ ಬಂದು ಮಾತನಾಡಿದ ಪವರ್ ಸ್ಟಾರ್, ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಯಮಾಡಿ 50 ಪರ್ಸೆಂಟ್ ಬೇಡ, 100 ಪರ್ಸೆಂಟ್ ಕೊಡಬೇಕು ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಒಂದು ಕನ್ನಡ ಸಿನಿಮಾವನ್ನ ಕೊಲೆ ಮಾಡಿದಾಗೇ ಆಗುತ್ತೆ. ಇನ್ನು ಮೂರು ದಿನಗಳ ಟಿಕೆಟ್ ಬುಕ್ಕಿಂಗ್ ಆಗಿದೆ. ಜೊತೆಗೆ ಫ್ಯಾಮಿಲಿ ಪ್ರೇಕ್ಷಕರು ಸಿನಿಮಾ ಚಿತ್ರಮಂದಿರಗಳಿಗೆ ಬರ್ತಾ ಇದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರ ತುಂಬಾ ಶಾಕ್ ಆಗಿದೆ ಅಂತಾ ಪವರ್ ಸ್ಟಾರ್ ಅಸಮಾಧಾನವನ್ನ ವ್ಯಕ್ತಪಡಿಸಿದರು.
ಇದನ್ನೂ ಓದಿ:Watch: ನಕ್ಕು ನಗಿಸುವ ಸಿನಿಮಾ ಕ್ರೇಜ್! 'ಯುವರತ್ನ' ಟಿಕೆಟ್‌ಗಾಗಿ ಅಭಿಮಾನಿಗಳ ಸರ್ಕಸ್!