ಕರ್ನಾಟಕ

karnataka

ETV Bharat / sitara

ದಾಂಡೇಲಿ ಮನೆಯಲ್ಲಿ ಊಟ ಸವಿದಿದ್ದ ಅಪ್ಪು ; ಫೋಟೋ ವೈರಲ್​​ - yuvratna shooting updates

ಇತ್ತೀಚೆಗೆ ಉತ್ತರ ಕರ್ನಾಟಕದ ದಾಂಡೇಲಿಯ ಗುಡ್ಡಗಾಡು ಪ್ರದೇಶದಲ್ಲಿ ಯುವರತ್ನ ಸಿನಿಮಾದ ಶೂಟಿಂಗ್​ ನಡೆದಿದೆ. ಈ ವೇಳೆ ಅಲ್ಲಿನ ಒಂದು ಸಾಮಾನ್ಯ ಕುಟುಂಬದ ಜೊತೆ ಪುನೀತ್​ ರಾಜ್​ ಕುಮಾರ್​​ ಊಟ ಮಾಡಿದ್ದಾರೆ. ನೆಲದಲ್ಲಿ ಕುಳಿತು, ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಫೋಟೋವೊಂದು ಇದೀಗ ಸಖತ್​​ ವೈರಲ್​ ಆಗುತ್ತಿದೆ.

Puneet Raj Kumar having lunch at Dandeli's house
ದಾಂಡೇಲಿ ಮನೆಯಲ್ಲಿ ಊಟ ಸವಿದಿದ್ದ ಅಪ್ಪು : ಇದೀಗ ಫೋಟೋ ವೈರಲ್​​

By

Published : Nov 7, 2020, 4:53 PM IST

ಅಭಿಮಾನಿಗಳಿಗೆ ಪುನೀತ್​ ರಾಜ್​ ಕುಮಾರ್​​ ಅಂದ್ರೆ ತುಂಬಾನೇ ಅಚ್ಚು ಮೆಚ್ಚು. ಹಾಗೇ ಪುನೀತ್​ ರಾಜ್​​​ ಕುಮಾರ್​ ಕೂಡ ಅಭಿಮಾನಿಗಳಲ್ಲಿ ಭೇದ ಭಾವ ಮಾಡದೆ ಎಲ್ಲರನ್ನೂ ಒಂದೇ ತೆರನಾಗಿ ಕಾಣುವಂತಹ ಸರಳ ಸಜ್ಜನಿಕೆಯ ನಟ.

ಇನ್ನು ಅಪ್ಪುಗೆ ಊಟ ಮಾಡೋದು ಅಂದ್ರೆ ತುಂಬಾ ಇಷ್ಟ. ವಿವಿಧ ಭಕ್ಷ್ಯಗಳನ್ನು ಸವಿಯೋದಂದ್ರೆ ನನಗೆ ತುಂಬಾ ಆಸೆ ಅಂತ ಇತ್ತೀಚಿನ ಸಂದರ್ಶನ ಒಂದರಲ್ಲಿ ಪುನೀತ್​ ರಾಜ್​​ಕುಮಾರ್​​ ಹೇಳಿಕೊಂಡಿದ್ದರು.

ಇತ್ತೀಚೆಗೆ ಉತ್ತರ ಕರ್ನಾಟಕದ ದಾಂಡೇಲಿಯ ಗುಡ್ಡಗಾಡು ಪ್ರದೇಶದಲ್ಲಿ ಯುವರತ್ನ ಸಿನಿಮಾದ ಶೂಟಿಂಗ್ ನಡೆದಿದೆ. ಈ ವೇಳೆ ಅಲ್ಲಿನ ಒಂದು ಸಾಮಾನ್ಯ ಕುಟುಂಬದ ಜೊತೆ ಪುನೀತ್​ ರಾಜ್​ ಕುಮಾರ್​​ ಊಟ ಮಾಡಿದ್ದಾರೆ. ನೆಲದಲ್ಲಿ ಕುಳಿತು, ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಫೋಟೋವೊಂದು ಇದೀಗ ಸಖತ್​​ ವೈರಲ್​ ಆಗುತ್ತಿದೆ.

ದಾಂಡೇಲಿ ಮನೆಯಲ್ಲಿ ಊಟ ಸವಿದಿದ್ದ ಅಪ್ಪು

ಇದೀಗ ಪುನೀತ್​ ರಾಜ್​​ಕುಮಾರ್​​ ಯುವರತ್ನ ಶೂಟಿಂಗ್​ ಮುಗಿಸಿ, ಇತ್ತೀಚೆಗೆ ಉತ್ತರ ಕರ್ನಾಟಕದ ಗಂಗಾವತಿ ಸಮೀಪದಲ್ಲಿ ಜೇಮ್ಸ್​​ ಸಿನಿಮಾದ ಶೂಟಿಂಗ್​ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ದಂಡೇ ನೆರೆದಿದ್ದು, ಅಪ್ಪುವನ್ನು ನೇರವಾಗಿ ಕಣ್ತುಂಬಿಕೊಂಡಿದ್ದರು.

ABOUT THE AUTHOR

...view details