ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದೊಡ್ಡ ಸ್ಟಾರ್ ನಟ ಆದರೂ ಬಹಳ ಸರಳ ಸ್ವಭಾವದ ವ್ಯಕ್ತಿ. ಎಲ್ಲರನ್ನೂ ಆತ್ಮೀಯತೆಯಿಂದಲೇ ನಗುನಗುತ್ತಾ ಮಾತನಾಡಿಸುವ ಪುನೀತ್ ರಾಜ್ಕುಮಾರ್, ಇಂದು ತಮ್ಮ ಕಾರು ಚಾಲಕನ ಹುಟ್ಟುಹಬ್ಬ ಆಚರಿಸಿ ಜನರ ಮನಸ್ಸಿಗೆ ಇನ್ನೂ ಹತ್ತಿರವಾಗಿದ್ದಾರೆ.
ಕಾರು ಚಾಲಕನ ಹುಟ್ಟುಹಬ್ಬ ಆಚರಿಸಿ ಸರಳತೆ ಮೆರೆದ ರಾಜಕುಮಾರ..! - Sandalwood star Puneet rajkumar
ಸ್ಯಾಂಡಲ್ವುಡ್ ರಾಜಕುಮಾರ ಪುನೀತ್ ರಾಜ್ಕುಮಾರ್ ತಮ್ಮ ಮನೆಯಲ್ಲಿ 30 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ಬಾಬು ಎಂಬುವವರ ಹುಟ್ಟುಹಬ್ಬ ಆಚರಿಸಿದ್ದಾರೆ. ಪವರ್ ಸ್ಟಾರ್ ಸರಳತೆಗೆ ಎಲ್ಲರೂ ಫಿದಾ ಆಗಿದ್ದಾರೆ.
ಬಾಬು ಎಂಬುವವರು ಕಳೆದ 30 ವರ್ಷಗಳಿಂದ ಅಣ್ಣಾವ್ರ ಮನೆಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಶೂಟಿಂಗ್ ಆಗಲೀ, ಯಾವುದೇ ಕಾರ್ಯಕ್ರಮವಾಗಲೀ ಪುನೀತ್ ಅವರನ್ನು ಜಾಗ್ರತೆಯಿಂದ ಕರೆದೊಯ್ದು, ಕರೆತರುವುದು ಬಾಬು ಅವರೇ. ಪುನೀತ್ ರಾಜ್ಕುಮಾರ್ ಕುಟುಂಬ ಕೂಡಾ ಬಾಬು ಅವರನ್ನು ಅಷ್ಟೇ ಪ್ರೀತಿಯಿಂದ ನೋಡುತ್ತಾರೆ. ಅವರನ್ನೂ ಕೂಡಾ ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ.
ಈ ಬಾಂಧವ್ಯಕ್ಕಾಗಿ ಇಂದು ಪುನೀತ್ ಹಾಗೂ ಪತ್ನಿ ಅಶ್ವಿನಿ ಸೇರಿ ಬಾಬು ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿಸಿ ತಿನ್ನಿಸಿ ಶುಭ ಕೋರಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಿಸಿದ ಪುನೀತ್ ಹಾಗೂ ಕುಟುಂಬಕ್ಕೆ ಬಾಬು ಕೂಡಾ ಧನ್ಯವಾದ ಹೇಳಿದ್ದಾರೆ.