'ಬೆಳಕು' ಸಿನಿಮಾ ಚಿತ್ರೀಕರಣದ ವೇಳೆ ಆರೋಗ್ಯದಲ್ಲಿ ಏರುಪೇರಾದ ಕಾರಣ ನಿನ್ನೆ ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಇಂದು ರಾಘಣ್ಣನನ್ನು ನೋಡಲು ಶಿವರಾಜ್ಕುಮಾರ್, ಪುನೀತ್ ರಾಜ್‍ಕುಮಾರ್, ನಟ-ನಿರ್ದೇಶಕ ಗುರುದತ್ ಬಂದಿದ್ದರು.
ರಾಘವೇಂದ್ರ ರಾಜ್‍ಕುಮಾರ್ ಆರೋಗ್ಯ ವಿಚಾರಿಸಿದ ಶಿವಣ್ಣ, ಪುನೀತ್ - Belaku movie shooting
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಣ್ಣನನ್ನು ಭೇಟಿ ಮಾಡಿದ ಪುನೀತ್ ರಾಜ್‍ಕುಮಾರ್, ರಾಘಣ್ಣ ಆರೋಗ್ಯವಾಗಿದ್ದಾರೆ, ಇಂದು ಅಥವಾ ನಾಳೆ ಅವರು ಡಿಸ್ಚಾರ್ಜ್ ಆಗಿ ಬರಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಕನ್ನಡದಲ್ಲಿ ಆಲ್ಫ್ಲಿಕ್ಸ್ ಹೆಸರಿನ ಓಟಿಟಿ ಆರಂಭ
ಚಿತ್ರೀಕರಣದ ವೇಳೆ ಉಸಿರಾಟದ ಸಮಸ್ಯೆ ಉಂಟಾದ ಕಾರಣ ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಇಂದು ಅವರಿಗೆ ಆ್ಯಂಜಿಯೋಗ್ರಾಂ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಾಗಿ ರಾಘವೇಂದ್ರರಾಜ್ ಕುಮಾರ್ ಸಹೋದರಾದ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಹಾಗೂ ಸ್ನೇಹಿತ ಗುರುದತ್ ಇಂದು ಆಸ್ಪತ್ರೆಗೆ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ಅಣ್ಣನ ಜೊತೆ ಇದ್ದು ಬಂದ ಪುನೀತ್ ಮಾಧ್ಯಮದವರೊಂದಿಗೆ ಮಾತನಾಡಿದರು. "ಅಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ. ಇಲ್ಲವಾದರೆ ನಾವು ಇಷ್ಟು ಆರಾಮಾವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಇಂದು ಅಥವಾ ನಾಳೆ ಅಣ್ಣನನ್ನು ಡಿಸ್ಚಾರ್ಜ್ ಮಾಡಲಾಗುವುದು" ಎಂದು ವೈದ್ಯರು ಹೇಳಿರುವುದಾಗಿ ಪುನೀತ್ ಮಾಹಿತಿ ನೀಡಿದರು.