ಕನ್ನಡ ಚಿತ್ರರಂಗದಲ್ಲಿ ಪರಭಾಷೆಯ ಸಿನಿಮಾಗಳು ಕನ್ನಡದಲ್ಲಿ ಡಬ್ಬಿಂಗ್ ಆಗಿ, ಬಿಡುಗಡೆ ಆಗೋದು ಸಾಮಾನ್ಯವಾಗಿದೆ. ಅದರಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಬೇರೆ ಭಾಷೆಯ ಸಿನಿಮಾಗಳು ವಿಶ್ವದಾದ್ಯಂತ ತೆರೆ ಕಾಣುತ್ತಿವೆ. ಇದೀಗ ತಮಿಳು ನಟ ಅಜಿತ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ "ವಲಿಮೈ" ಚಿತ್ರ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದು, ಇದೇ 24ಕ್ಕೆ ರಿಲೀಸ್ ಆಗುತ್ತಿದೆ.
ಕರ್ನಾಟಕದಲ್ಲಿ ಈ ಸಿನಿಮಾದ ವಿತರಣೆ ಹಕ್ಕನ್ನು ಕಮಾರ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ, ಕನ್ನಡ, ತೆಲುಗು, ತಮಿಳು ಹಾಗು ಹಿಂದಿ ಭಾಷೆಯ ವಿತರಣೆ ಹಕ್ಕನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್ ಕಾರ್ಯಕ್ರಮನ್ನ ನಿರ್ಮಾಪಕ ಕಮ್ ವಿತರಕ ಕಮಾರ್ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ವಲಿಮೈ ಚಿತ್ರದ ನಿರ್ದೇಶಕ ಹೆಚ್. ವಿನೋದ್, ಈ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿರೋ ತೆಲುಗು ನಟ ಕಾರ್ತಿಕೇಯ ಗುಮ್ಮಾಕೊಂಡ, ಅಜಿತ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಬಾಲಿವುಡ್ ನಟಿ ಹುಮಾ ಖುರೇಷಿ ಹಾಗು ಅಜಿತ್ ತಾಯಿ ಪಾತ್ರ ಮಾಡಿರೋ ಕನ್ನಡದ ನಟಿ ಸುಮಿತ್ರಾ ಆಗಮಿಸಿ ಈ ಚಿತ್ರದ ವಿಶೇಷತೆ ಬಗ್ಗೆ ಮಾತನಾಡಿದರು.
ಕನ್ನಡದ ಹಿರಿಯ ನಟಿ ಸಮಿತ್ರಾ ಮಾತನಾಡಿ, ಅಜಿತ್ ಜೊತೆ ಈಗಾಗ್ಲೇ ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಆದರೆ ಈ ಸಿನಿಮಾ ಸ್ವಲ್ಪ ಸ್ಪೆಷಲ್ ಯಾಕಂದ್ರೆ, ಅಜಿತ್ ನನ್ನ ಸ್ವತಃ ಮಗನ ಹಾಗೇ ನಟಿಸಿದ್ದಾರೆ ಅಂದರು.
ವಲಿಮೈ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ಕಾರ್ತಿಕೇಯ ಗುಮ್ಮಾಕೊಂಡ, ಮೊದಲಿಗೆ ಕನ್ನಡದಲ್ಲಿ ಮಾತನಾಡುತ್ತಾ ಗಮನ ಸೆಳೆದರು. ಈ ಚಿತ್ರದಲ್ಲಿ ನಾನು ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೇನೆ. ಬೆಂಗಳೂರು ಅಂದ್ರೆ ನನಗೆ ತುಂಬಾ ಇಷ್ಟ. ಯಾಕಂದ್ರೆ ನನ್ನ ಆರ್ಎಕ್ಸ್ 100 ಸಿನಿಮಾವನ್ನ ಇಲ್ಲಿನ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡು ಬೆನ್ನು ತಟ್ಟಿದ್ದರು. ಹೀಗಾಗಿ ಬೆಂಗಳೂರು ಸ್ಪೆಷಲ್. ಮುಂದಿನ ಸಿನಿಮಾ ಪ್ರಮೋಷನ್ ಹೊತ್ತಿಗೆ ಕನ್ನಡವನ್ನ ಕಲಿತುಕೊಂಡು ಕನ್ನಡ ಮಾತನಾಡುತ್ತೇನೆ ಎಂದು ಕಾರ್ತಿಕೇಯ ಹೇಳಿದರು.