ಕರ್ನಾಟಕ

karnataka

ETV Bharat / sitara

ಚಿತ್ರರಂಗದಿಂದ ಬಹಿಷ್ಕಾರದ ಬೆದರಿಕೆ... ದಿಟ್ಟ ಉತ್ತರ ಕೊಟ್ಟ ಧೀರೆ ನಿತ್ಯಾ ಮೆನನ್​ - ಸೌಥ್ ಸುಂದರಿ

ನಿತ್ಯಾ ಮೆನನ್ ಕೆಲ ದಿನಗಳಿಂದ ವಿವಾದವೊಂದರ ಸುಳಿಗೆ ಸಿಲುಕಿದ್ದಾರೆ. ಇವರನ್ನು ಚಿತ್ರರಂಗದಿಂದ ನಿಷೇಧಿಸುವುದಾಗಿ ಮಲಯಾಳಂನ ನಿರ್ಮಾಪಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ನಿತ್ಯಾ ಸಹ ದಿಟ್ಟ ಉತ್ತರವನ್ನೇ ಕೊಟ್ಟಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : May 1, 2019, 7:39 PM IST

ನಟಿ ನಿತ್ಯಾ ಮೆನನ್ ಮೇಲೆ ಮುನಿಸಿಕೊಂಡಿರುವ ಮಾಲಿವುಡ್​ ನಿರ್ಮಾಪಕರು ಚಿತ್ರರಂಗದಿಂದ ಮೈನಾಗೆ ಬಹಿಷ್ಕಾರ ಹಾಕುವುದಾಗಿ ಹೇಳಿದ್ದಾರೆ.

ಹೌದು, ಸೌಥ್ ಸುಂದರಿ ನಿತ್ಯಾ ಮೆನನ್ ಕೆಲ ದಿನಗಳಿಂದ ಕಾಂಟ್ರವರ್ಸಿಯೊಂದರಲ್ಲಿ ಸಿಲುಕಿದ್ದಾರೆ. ಈ ಚೆಲುವೆ ಕುರಿತು ಇಲ್ಲ-ಸಲ್ಲದ ವದಂತಿಗಳು ಹುಟ್ಟಿಕೊಳ್ಳುತ್ತಿವೆ. ನಿರ್ಮಾಪಕರನ್ನು ಭೇಟಿ ಆಗುತ್ತಿಲ್ಲ. ಈಕೆಗೆ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆ ಆಗಿದೆ. ಅವರು ಜಂಭದ ಕೋಳಿಯಂತಾಗಿದ್ದಾರೆ. ಗರ್ವದಿಂದ ವರ್ತಿಸುತ್ತಿದ್ದಾರೆ ಎಂದು ಮಲಯಾಳಂನ ನಿರ್ಮಾಪಕರು ಆರೋಪಿಸುತ್ತಿದ್ದಾರೆ. ನಿತ್ಯಾ ನಡೆ ನಮಗೆ ಕೋಪ ತರಿಸಿದ್ದು, ಆಕೆಯನ್ನು ಚಿತ್ರರಂಗದಿಂದ ನಿಷೇಧಿಸುತ್ತೇವೆ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.

ನಿತ್ಯಾ ನಿಜವಾಗಿಯೂ ಹಾಗೇ ವರ್ತಿಸುತ್ತಿದ್ದಾರಾ?

ಅದು 'Thatsamayam Oru Penkutty' ಚಿತ್ರದ ಶೂಟಿಂಗ್ ಸಮಯ. ನಿತ್ಯಾ ಭೇಟಿಗೆ ಒಂದಿಷ್ಟು ನಿರ್ಮಾಪಕರು ಬಂದಿದ್ದರು. ಅನುಮತಿ ಪಡೆಯದೇ ಈ ನಟಿಯನ್ನು ಮೀಟ್ ಮಾಡಲು ಅವರು ಮುಂದಾಗಿದ್ದರು. ಆದರೆ, ನಿತ್ಯಾ ಮಾತ್ರ ಅವರನ್ನು ಭೇಟಿ ಮಾಡಲಿಲ್ಲ. ಇದರಿಂದ ಕೆರಳಿ ಕೆಂಡವಾಗುತ್ತಿರುವ ಅವರು ನಟಿಯ ವಿರುದ್ಧ ನಕಾರಾತ್ಮಕ ಅಂಶಗಳನ್ನು ಹರಿಬಿಡುತ್ತಿದ್ದಾರೆ.

ಈ ಬಗ್ಗೆ ಸಂದರ್ಶನವೊಂದಲ್ಲಿ ಸ್ಪಷ್ಟನೆ ನೀಡಿರುವ ನಿತ್ಯಾ, ಆಘಾತಕಾರಿ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. 'ನಮ್ಮ ತಾಯಿ ಮೂರನೇ ಹಂತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇದರಿಂದ ಧೃತಿಗೆಟ್ಟಿರುವ ನಾನು, ಈ ನೋವನ್ನು ನುಂಗಿಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಶೂಟಿಂಗ್ ಮುಗಿಸಿಕೊಂಡು ಕ್ಯಾರಾವ್ಯಾನ್​​ಗಳಲ್ಲಿ ಒಬ್ಬಳೇ ಕುಳಿತು ಅಳುತ್ತಿದ್ದೇನೆ. ನನ್ನ ಈ ರೋದನೆ ಯಾರಿಗೆ ಗೊತ್ತು ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಇದೇ ವೇಳೆ ತಮ್ಮ ವಿರುದ್ಧ ಕೇಳಿ ಬರುತ್ತಿರುವ ವದಂತಿಗಳ ಕುರಿತು ಪ್ರತಿಕ್ರಿಯಿಸಿರುವ ನಿತ್ಯಾ, 'ನಾನು ಅವುಗಳಿಗೆಲ್ಲ ಕೇರ್ ಮಾಡೋಲ್ಲ. ಬೇಕಾದರೆ ಅವರು ನನ್ನ ಅಹಂಕಾರಿ ಎಂದು ಕರೆಯಲಿ. ಕೇವಲ ನನ್ನ ಕೆಲಸದ ಮೇಲೆ ನನ್ನ ಗಮನ ಕೊಡುತ್ತೇನೆ' ಎಂದು ಖಡಕ್​ ಆಗಿ ಹೇಳಿದ್ದಾರೆ.

ABOUT THE AUTHOR

...view details