ಕರ್ನಾಟಕ

karnataka

ETV Bharat / sitara

ಮೊದಲು ನಿರ್ಮಾಪಕರು ಕನಸು ಕಾಣಬೇಕು, ಆಮೇಲೆ ಕಲಾವಿದರು: ದರ್ಶನ್​​ - ಮದಕರಿ ನಾಯಕ

ಕುರುಕ್ಷೇತ್ರ ಸಿನಿಮಾದ ಮಾಧ್ಯಮಗೋಷ್ಠಿ ನಂತರ ಕೆಲವು ಪತ್ರಕರ್ತರ ಜೊತೆ ಮಾತನಾಡಿದ ದರ್ಶನ್, ಮೊದಲು ಚಿತ್ರ ಮಾಡುವುದಕ್ಕೆ ನಾಲ್ಕು ಗುಂಡಿಗೆ ಬೇಕು. ಅದಕ್ಕೂ ಮೊದಲು ನಿರ್ಮಾಪಕ ಅಂತಹ ಸಿನಿಮಾಗಳ ಕನಸು ಕಾಣಬೇಕು. ಆಮೇಲೆ ಕಲಾವಿದರು ಎಂದು ಹೇಳಿದ್ದಾರೆ.

ದರ್ಶನ್

By

Published : Aug 5, 2019, 9:01 AM IST

ಕನ್ನಡ ಚಿತ್ರರಂಗದ ಚರಿತ್ರೆಯ ಪುಟಗಳಲ್ಲಿ ಮುನಿರತ್ನ ನಿರ್ದೆಶನದ ಕುರುಕ್ಷೇತ್ರ ಸಿನಿಮಾ ಸೇರಿಕೊಂಡಿದೆ. ಈಗ ಮತ್ತೊಂದು ‘ಮದಕರಿ ನಾಯಕ’ ಎಂಬ ಚಾರಿತ್ರಿಕ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಕೂಡ ಡಿಬಾಸ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹದೊಂದು ಯಾವುದಾದರೂ ಪಾತ್ರ ಮಾಡುವ ಅಭಿಲಾಷೆ ನಿಮ್ಮ ಮನಸಿನಲ್ಲಿದೆಯೇ ಎಂದು ಕೇಳಿದಕ್ಕೆ, ಇಂತಹ ಚಿತ್ರ ಮಾಡುವುದಕ್ಕೆ ನಾಲ್ಕು ಗುಂಡಿಗೆ ಬೇಕು. ಅದಕ್ಕೆ ಮೊದಲು ನಿರ್ಮಾಪಕ ಅಂತಹ ಸಿನಿಮಾಗಳ ಕನಸು ಕಾಣಬೇಕು ಎಂದು ದರ್ಶನ್ ಹೇಳಿದ್ದಾರೆ.

ಕುರುಕ್ಷೇತ್ರ ಸಿನಿಮಾದ ಮಾಧ್ಯಮಗೋಷ್ಠಿ ನಂತರ ಕೆಲವು ಪತ್ರಕರ್ತರ ಜೊತೆ ಮಾತನಾಡಿದ ದರ್ಶನ್​​, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರ ಮಾಡಲು ಒಪ್ಪಿದಾಗ ನಾನು ಸಾಕಷ್ಟು ಪೌರಾಣಿಕ ಸಿನಿಮಾಗಳನ್ನು ನೋಡಿದೆ. ನಾನಿರುವ ಮೈಸೂರಿನಲ್ಲಿ ಪೌರಾಣಿಕ ನಾಟಕಗಳನ್ನು ನಾನು ನೋಡಿಲ್ಲ. ಭಕ್ತ ಪ್ರಹ್ಲಾದ ಅಲ್ಲದೆ ಎನ್​​​ಟಿ ರಾಮರಾವ್ ಅವರ ಅಭಿನಯದ ಸಿನಿಮಾಗಳನ್ನು ನೋಡಿದೆ. ಬೆಳಗ್ಗೆ ಕೆಲ ಹೊತ್ತು ವ್ಯಾಯಾಮ ನಂತರ ನನ್ನ ಸಂಭಾಷಣೆ ಬಗ್ಗೆ ಗಮನ, ಚಿತ್ರೀಕರಣ ಸಮಯದಲ್ಲಿ ನಾನು ಮೊದಲು ನೋಡುತ್ತಾ ಇದ್ದದ್ದು ಹಿರಿಯ ನಟ ಶ್ರೀನಿವಾಸಮೂರ್ತಿ ಅವರನ್ನು. ಅವರು ಒಂದು ಸೂಚನೆ ಕೊಡುತ್ತಾ ಇದ್ದರು. ಆಮೇಲೆ ಕೆಲವು ಗಂಟೆ ಮುಂದಿನ ದಿನದ ಸಂಭಾಷಣೆ ಬಗ್ಗೆ ಗಮನ, ನಂತರ ನಿದ್ರೆಗೆ ಜಾರುತ್ತಿದ್ದೆ. ಮತ್ತೆ 4.30 ಗಂಟೆಗೆ ಎದ್ದು ಪುನಃ ದಿನಚರಿ ಪ್ರಾರಂಭ. ದರ್ಶನ್ ಪ್ರಕಾರ ದುರ್ಯೋಧನ ಒಬ್ಬ ನಿಜವಾದ ನಾಯಕ. ಅವನ ಹುಟ್ಟು ಮತ್ತು ಸಾವು ಅಹಂಕಾರದಲ್ಲಿ ಅಷ್ಟೇ ಎಂದರು.

ಕುರುಕ್ಷೇತ್ರ ಡಬ್ಬಿಂಗ್ ಸಮಯದಲ್ಲಿ ನನಗೆ ಕಷ್ಟ ಆಗುತ್ತಾ ಇತ್ತು. ಚಿತ್ರೀಕರಣದಲ್ಲಿ ಹೇಳಿದ್ದನ್ನು ಬಹಳ ದಿವಸಗಳ ನಂತರ ಹೇಳಬೇಕಾಗಿತ್ತು. ಆಗ ಕೆಲವು ಮರೆತು ಹೋಗುತ್ತಾ ಇತ್ತು. 28 ದಿವಸ ಡಬ್ಬಿಂಗ್ ಮಾಡಬೇಕಾಯಿತು. ಕುರುಕ್ಷೇತ್ರ ಚಿತ್ರೀಕರಣ ಕೆಲವು ಭಾಗ ಆಗಿನ ಕಾಲದಲ್ಲಿ ಎನ್.ಟಿ. ರಾಮರಾವ್ ಅಭಿನಯ ಮಾಡುತ್ತಾ ಇದ್ದ ಸೆಟ್​​ನಲ್ಲಿ ಮಾಡಲಾಗಿದೆ. ಆ ಪೌರಾಣಿಕ ಸೆಟ್​​​ಅನ್ನು ಹೈದರಾಬಾದ್​​ನಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ. ಇದು ಎರಡು ವರ್ಷಗಳ ಪರಿಶ್ರಮ. 70ರ ದಶಕದ ಕಲಾವಿದರಿಂದ 2010ರ ವರೆಗಿನ ನಾಲ್ಕು ದಶಕಗಳ ಕಲಾವಿದರು ಇಲ್ಲಿ ಕಾಣುತ್ತಾರೆ ಎಂಬುದು ದರ್ಶನ್ ಅವರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಸಿನಿಮಾ 2 ಡಿ ಹಾಗೂ 3 ಡಿನಲ್ಲಿ ಮೂಡಿಬಂದಿದ್ದು, ಇಂದಿನ ಪೀಳಿಗೆ ನೋಡಲೇಬೇಕಾದ ಸಿನಿಮಾವೆಂದು ದರ್ಶನ್ ಹೇಳುತ್ತಾರೆ.

ABOUT THE AUTHOR

...view details