ಕರ್ನಾಟಕ

karnataka

ETV Bharat / sitara

ಹೊಂಬಾಳೆ ಫಿಲಂಸ್‌ಗೆ ಕೃತಜ್ಞತೆ ತಿಳಿಸಿದ ಚಿತ್ರೋದ್ಯಮ ಕಾರ್ಮಿಕರ ಸಂಘ

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕನ್ನಡ ಚಿತ್ರೋದ್ಯಮದ ಕಾರ್ಮಿಕರಿಗೆ 32 ಲಕ್ಷ ರೂ. ದೇಣಿಗೆ ನೀಡಿದ ಹೊಂಬಾಳೆ ಫಿಲಂ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಂಗದೂರು ಅವರಿಗೆ ಚಿತ್ರರಂಗದ ಕಾರ್ಮಿಕರ ಅಧ್ಯಕ್ಷರುಗಳು ಕೃತಜ್ಞತೆ ಸಲ್ಲಿಸಿದ್ದಾರೆ.

Bangalore
ಹೊಂಬಾಳೆ ಫಿಲ್ಮ್ ಸಂಸ್ಥೆಗೆ ಕೃತಜ್ಞತೆ ಹೇಳಿದ ಕಾರ್ಮಿಕರ ಸಂಘ

By

Published : Jun 9, 2021, 8:29 AM IST

ಹೊಂಬಾಳೆ ಫಿಲಂಸ್‌ ನಿರ್ಮಾಪಕ ವಿಜಯ್ ಕಿರಂಗದೂರು ಕರ್ನಾಟಕ ಚಲನಚಿತ್ರ ಒಕ್ಕೂಟದ ಕಾರ್ಮಿಕರಿಗೆ 32 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಹಣ ಒಕ್ಕೂಟದ ಎಲ್ಲಾ ವಿಭಾಗದ ಕಾರ್ಮಿಕರ ಬ್ಯಾಂಕ್‌ ಖಾತೆಗಳಿಗೆ ಜಮಾವಣೆಯಾಗಿದೆ.

ಹೊಂಬಾಳೆ ಫಿಲ್ಮ್ ಸಂಸ್ಥೆಗೆ ಕೃತಜ್ಞತೆ ಹೇಳಿದ ಕಾರ್ಮಿಕರ ಸಂಘ

ಈ ಹಿನ್ನೆಲೆಯಲ್ಲಿ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್, ಚಲನಚಿತ್ರ ನಿರ್ಮಾಣ ಮತ್ತು ನಿರ್ವಾಹಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಸಿನಿಮಾ ಸೌಂಡ್ ಇಂಜಿನಿಯರಿಂಗ್ ಸಂಗೀತ ಅಧ್ಯಕ್ಷ ಜಯಕುಮಾರ್, ಕರ್ನಾಟಕ ಜಾಹೀರಾತು ಸಂಘದ ಅಧ್ಯಕ್ಷ ರವಿಂದ್ರನಾಥ್, ವರ್ಣಾಲಂಕಾರ ಮತ್ತು ಕೇಶಾಲಂಕಾರ ಸಂಘದ ಅಧ್ಯಕ್ಷ ನಂದಕುಮಾರ್, ಕಂಠದಾನ‌ ಕಲಾವಿದರ ಸಂಘದ ಅಧ್ಯಕ್ಷ ಮಂಜುನಾಥ್ ಬಿ.ಟಿ,‌ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ಕಿರಣ್ ಸೇರಿದಂತೆ ಕರ್ನಾಟಕ ಚಲನಚಿತ್ರ ಒಕ್ಕೂಟದ ಹಲವು ವಿಭಾಗಗಳ ಅಧ್ಯಕ್ಷರುಗಳು ಹೊಂಬಾಳೆ ಫಿಲ್ಮ್ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಂಗದೂರು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕೊರೊನಾ ಹೆಮ್ಮಾರಿಯಿಂದ ಕಳೆದ ಎರಡು ವರ್ಷದಿಂದ ಇಡೀ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೋವಿಡ್ ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ, ಚಿತ್ರರಂಗವನ್ನೇ ನಂಬಿರುವ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ಇಂತಹ ಪರಿಸ್ಥಿತಿಯಲ್ಲಿ ಉಪೇಂದ್ರ, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಸೇರಿದಂತೆ ಹಲವರು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ:ರೋಹಿಣಿ ಸಿಂಧೂರಿ ಬಯೋಪಿಕ್; ಈ ನಟಿಗೆ ಡಿಸಿಯಾಗುವ ಸುವರ್ಣಾವಕಾಶ

ABOUT THE AUTHOR

...view details