ಕರ್ನಾಟಕ

karnataka

ETV Bharat / sitara

ನಟಿ ಸಂಜನಾ ವಿರುದ್ಧ ಕಾನೂನು ಸಮರ ಸಾರಿದ ನಿರ್ಮಾಪಕಿ ವಂದನಾ - ವಿಡಿಯೋ - Vandana Jain talking about sanjana video

ನಾನು ಅವಳ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಸಂಜನಾ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾಗಿರುವುದಾಗಿ ಸುದೀರ್ಘ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

Vandana Jain , sanjana
ವಂದನಾ, ಸಂಜನಾ

By

Published : Jan 3, 2020, 12:00 PM IST

ಎಣ್ಣೆ ನಶೆಯಲ್ಲಿ ನಟಿ ಸಂಜನಾ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಾಲ್ಕೈದು ದಿನಗಳಿಂದ ಕಾಣೆಯಾಗಿದ್ದ ನಿರ್ಮಾಪಕಿ ವಂದನಾ ಜೈನ್ ಇಂದು ಪ್ರತ್ಯಕ್ಷವಾಗಿದ್ದಾರೆ. ಇದೀಗ ಅವರು ನಟಿ ಸಂಜನಾ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.

ನಿರ್ಮಾಪಕಿ ವಂದನಾ ಜೈನ್ ವಿಡಿಯೋ

ಈ ವಿಚಾರವಾಗಿ ವಿಡಿಯೋ ಮಾಡಿ ಹರಿಬಿಟ್ಟಿರುವ ನಿರ್ಮಾಪಕಿ ವಂದನಾ ಜೈನ್, ಅಂದಿನ ಗಲಾಟೆಯಲ್ಲಿ ನನ್ನ ಕಣ್ಣಿಗೆ ಸ್ವಲ್ಪ ಪೆಟ್ಟಾಗಿತ್ತು. ಹಾಗಾಗಿ ನಾನು ಇಷ್ಟು ದಿನ ಕಾಣಿಸಿಕೊಂಡಿರಲಿಲ್ಲ. ವೈದ್ಯರಿಂದ ಚಿಕಿತ್ಸೆ ಪಡೆದು ಈಗ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಸಂಜನಾ ನನಗೆ ಅವಮಾನ ಮಾಡಿದ್ದಾಳೆ.

ನಾನು ಅವಳ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಸಂಜನಾ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾಗಿರುವುದಾಗಿ ಸುದೀರ್ಘ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details