ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಹಲವು ರೂಪ ಪಡೆಯುತ್ತಿದೆ. ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ, ಅರುಣಾ ಕುಮಾರಿ ಎಂಬ ಮಹಿಳೆಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರೂ ಕೇಳಿಬಂದಿದೆ.
ಈ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗು ದರ್ಶನ್ ನಡುವೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕೂಡ ಹಬ್ಬುತ್ತಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವಿಚಾರಗಳ ಮಾಹಿತಿ ನೀಡಿದ್ದಾರೆ.
ನನ್ನ ಮೇಲೆ ಕೇಳಿ ಬರುತ್ತಿರುವ ಆರೋಪ ಸುಳ್ಳು:
ಏಪ್ರಿಲ್ನಲ್ಲಿ ಅರುಣಾ ಕುಮಾರಿ ಆ್ಯಕ್ಷನ್ನಲ್ಲಿ ಒಂದು ಪ್ರಾಪರ್ಟಿ ಖರೀದಿ ಬಗ್ಗೆ ಹೇಳಿದ್ದರು. ಆ ವಿಚಾರಕ್ಕೆ ನಾನು ಅವರ ಬಳಿ ಫೋನ್ ಹಾಗು ವಾಟ್ಸ್ಆ್ಯಪ್ ಮೂಲಕ ಮಾತನಾಡಿದ್ದೆ. ಇದಾದ ಬಳಿಕ ಜೂನ್ 17 ರಂದು ಅರುಣಾ ಕುಮಾರಿ ನನ್ನ ಕಚೇರಿಗೆ ಬಂದರು. ಜೊತೆಗೆ ರಾಕೇಶ್ ಪಾಪಣ್ಣ ಮತ್ತು ಹರ್ಷ ಅವರ ಹೆಸರು ಪ್ರಸ್ತಾಪ ಮಾಡಿದರು. ಬಳಿಕ ಲೋನ್ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಕೆಲ ದಾಖಲಾತಿಗಳು ದರ್ಶನ್ ಅವರಿಗು ಸಂಭದಿಸಿವೆ ಎಂದು ತಿಳಿಸಿದರು. ಆಗ ನಾನು ದರ್ಶನ್ ಅವರಿಗೆ ಕರೆ ಮಾಡಿ ತಿಳಿಸಿದೆ ಎಂದು ಹೇಳಿದರು.