ಕರ್ನಾಟಕ

karnataka

ETV Bharat / sitara

ದರ್ಶನ್ ಜೊತೆ ಮತ್ತೊಂದು ಹೊಸ ಚಿತ್ರ ಘೋಷಿಸಿದ 'ರಾಬರ್ಟ್' ನಿರ್ಮಾಪಕ - Darhan new movie script pooja

ದರ್ಶನ್ ಅಭಿನಯದ ಬಹುನಿರೀಕ್ಷಿತ 'ರಾಬರ್ಟ್'​ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ನಿರ್ಮಾಪಕ ಉಮಾಪತಿ ದರ್ಶನ್ ಅವರೊಂದಿಗೆ ಮತ್ತೊಂದು ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ತರುಣ್ ಸುಧೀರ್ ಅವರೇ ಈ ಚಿತ್ರವನ್ನು ಕೂಡಾ ನಿರ್ದೇಶಿಸಲಿದ್ದು ಇಂದು ಬೆಂಗಳೂರಿನಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿಸಲಾಗಿದೆ.

Umapati new movie with Darshan
ದರ್ಶನ್ ಜೊತೆ ಉಮಾಪತಿ ಹೊಸ ಸಿನಿಮಾ

By

Published : Aug 1, 2020, 11:37 AM IST

ಉಮಾಪತಿ ನಿರ್ಮಾಣದ 'ರಾಬರ್ಟ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವುದು ತಿಳಿದ ವಿಚಾರ. ಕಳೆದ ವಾರ ಉಮಾಪತಿ ಹುಟ್ಟುಹಬ್ಬದಂದು ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಉಮಾಪತಿ ದರ್ಶನ್ ಜೊತೆಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.

ರಾಬರ್ಟ್ ಚಿತ್ರದ ಪೋಸ್ಟರ್

ದರ್ಶನ್ ಹಾಗೂ ಉಮಾಪತಿ ಕಾಂಬಿನೇಷನ್​​​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಈ ಚಿತ್ರವನ್ನು ಕೂಡಾ ತರುಣ್ ಸುಧೀರ್ ನಿರ್ದೇಶಿಸಲಿದ್ದು, ನಿನ್ನೆ ಬೆಂಗಳೂರಿನ ತರುಣ್ ಸುಧೀರ್ ಕಚೇರಿಯಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಚಿತ್ರದ ಹೆಸರನ್ನು ಇನ್ನೂ ಫೈನಲ್ ಮಾಡದ ಕಾರಣ ಪ್ರೊಡಕ್ಷನ್ ನಂಬರ್ 4 ಹೆಸರಿನಲ್ಲಿ ಪೂಜೆ ಮಾಡಲಾಗಿದೆ.

ಸ್ಕ್ರಿಪ್ಟ್ ಪೂಜೆ

ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್​​​​​​​​​ನಲ್ಲಿ 'ಸಿಂಧೂರ ಲಕ್ಷಣ' ಸಿನಿಮಾ ಬರಲಿದೆ ಎಂದು ಕೆಲವು ದಿನಗಳ ಹಿಂದೆ ಹೇಳಲಾಗಿತ್ತು. ರಾಬಿನ್ ಹುಡ್ ಶೈಲಿಯಲ್ಲಿರುವ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ದಚ್ಚು ಮಿಂಚಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಸಿಂಧೂರ ಲಕ್ಷ್ಮಣ 18 ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ.

ದರ್ಶನ್ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿಹುಟ್ಟಿ 24 ನೇ ವಯಸ್ಸಿಗೆ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಸಿಂಧೂರ ಲಕ್ಷಣನಾಗಿ ದರ್ಶನ್ ತೆರೆ ಮೇಲೆ ಬರಲು ತಯಾರಿ ನಡೆಸುತ್ತಿದ್ದು ಅದಕ್ಕೆ ಉಮಾಪತಿ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿತ್ತು. ಇದೀಗ ಈ ಹೊಸ ಸಿನಿಮಾ ಘೋಷಣೆಯಾಗಿರುವುದು ನೋಡಿದರೆ ಇದು ಬಹುಶ: ಅದೇ ಸಿನಿಮಾ ಇರಬಹುದಾ ಎಂಬ ಅನುಮಾನ ಕಾಡುತ್ತಿದೆ.

ದರ್ಶನ್

ಈ ಚಿತ್ರದ ಬಗ್ಗೆ ದರ್ಶನ್, ಉಮಾಪತಿ ಅಥವಾ ತರುಣ್ ಸುಧೀರ್ ಆಗಲಿ ಹೆಚ್ಚಿನ ಮಾಹಿತಿ ತಿಳಿಸಿಲ್ಲ. ಒಟ್ಟಿನಲ್ಲಿ ದರ್ಶನ್ ಅವರ ಹೊಸ ಸಿನಿಮಾ ಬರಲಿದೆ ಎಂದು ಅಭಿಮಾನಿಗಳು ಖುಷಿಯಲ್ಲಿರುವುದಂತೂ ನಿಜ. ಆದಷ್ಟು ಬೇಗ ಈ ಹೊಸ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ABOUT THE AUTHOR

...view details