ಬೆಂಗಳೂರು: ಮಿಸ್ಟರ್ ಮೊಮ್ಮಗ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರೋ ನಟ ಎಸ್. ಎಸ್ ರವಿಗೌಡ ಅವರು ಈಗ ರೌಡಿ ಬೇಬಿ ಸಿನೆಮಾದ ಹಿಂದೆ ಬಿದ್ದಿದ್ದಾರೆ.
ಈಗಾಗಲೇ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಜ್ಜಾಗಿರೋ ರೌಡಿ ಬೇಬಿ ಸಿನಿಮಾಗೆ ಹೆಬ್ಬುಲಿ ಸಿನಿಮಾ ನಿರ್ಮಾಪಕ ಶ್ರೀನಿವಾಸ್ ಗೌಡರ ಸಪೋರ್ಟ್ ಸಿಕ್ಕಿದೆ. ಹೌದು, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ, ರೌಡಿ ಬೇಬಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಉಮಾಪತಿ ಜೊತೆಯಾಗಿ ನಿರ್ಮಾಪಕ ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಸಾಥ್ ನೀಡಿದರು. ಕ್ಯಾಚಿ ಟೈಟಲ್ ಹೊಂದಿರುವ ರೌಡಿ ಬೇಬಿ ಸಿನಿಮಾ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ. ನಾಯಕ ನಟ ಎಸ್. ಎಸ್ ರವಿಗೌಡ ಸ್ವಲ್ಪ ದಪ್ಪ ಇದ್ದ ಕಾರಣ ಪಾತ್ರಕ್ಕಾಗಿ 15 ಕೆಜಿ ತೂಕವನ್ನ ಇಳಿಸಿ ಈ ಪಾತ್ರವನ್ನ ಮಾಡಿದ್ದಾರಂತೆ. ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್, ಬಿಗ್ ಬಾಸ್ ಹೋಗುವುದಕ್ಕಿಂತ ಮುಂಚೆ ಈ ಸಿನಿಮಾದಲ್ಲಿ ನಟಿಸಿದ್ದರಂತೆ.