ಮೈಸೂರು :ಸಿನಿಮಾಕ್ಕೆ ಯಾವುದೇ ಜಾತಿ ಮತ್ತು ಪಕ್ಷ ಇಲ್ಲ. ಎಲ್ಲರೂ ಒಂದೇ.. ಇಬ್ಬರನ್ನೂ ಕೂರಿಸಿ ಪ್ರೆಸ್‌ಮೀಟ್ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಗ್ಗೇಶ್ ಪ್ರಕರಣ ನಡೆಯಬಾರದಿತ್ತು, ಈಗ ನಡೆದಿದೆ. ಇದು ಹೀಗೆ ಮುಂದುವರಿಯಬಾರದು, ಇಬ್ಬರನ್ನೂ ಕರೆದು ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಈ ಬಗ್ಗೆ ಇಬ್ಬರಲ್ಲೂ ಮನವಿ ಮಾಡುತ್ತೇನೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೇನೆ. ನಟ ಶಿವರಾಜ್ ಕುಮಾರ್ ಅವರಿಗೂ ಮನವಿ ಮಾಡಿದ್ದೇನೆ ಎಂದರು.
ನನಗೆ ಮೇಯರ್ ಚುನಾವಣೆಗೆ ಆಹ್ವಾನ ನೀಡರಲಿಲ್ಲ :ಯಾರಿಗೆ ವೋಟ್ ನೀಡಬೇಕು ಅಂತಾ ಗೊತ್ತಿರಲಿಲ್ಲ. ಈ ಕಾರಣದಿಂದ ನಾನು ಚುನಾವಣೆಗೆ ಹೋಗಲಿಲ್ಲ. ಕಳೆದ ದಿನಗಳ ಹಿಂದೆ ಬಿಜೆಪಿಯವರು ಪರಿಷತ್ನಲ್ಲಿ ಬೆಂಬಲ ನೀಡಿದರು. ಈಗ ಕಾಂಗ್ರೆಸ್‌ಗೆ ಮತ ನೀಡಿ ಅಂದರೆ ಏನು ಅರ್ಥ ಎಂದು ಜೆಡಿಎಸ್ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಪ್ರಶ್ನಿಸಿದರು.
ಇದನ್ನೂ ಓದಿ:ಅಹಂ ಬೇಡ, ನಾನು ನಾನು ಅನ್ನೋದು ಬೇಡ.. ಸುದ್ದಿಗೋಷ್ಠಿ ವೇಳೆ ಜಗ್ಗೇಶ್ ಮಾತು!