ಮೈಸೂರು : ಕನ್ನಡ ಚಿತ್ರರಂಗಕ್ಕೆ ಯಜಮಾನ ಇಲ್ಲದಿರುವುದೇ ಇಂದಿನ ಸಮಸ್ಯೆಗೆ ಕಾರಣ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಹಿಂದೆ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇದ್ದಾಗ ಒಂದು ಭಯ ಇತ್ತು. ಅವರ ಮೇಲಿನ ಗೌರವಕ್ಕೆ ಹೆದರಿ ಯಾರೂ ದಾರಿ ತಪ್ಪುತ್ತಿರಲಿಲ್ಲ. ಈಗ ಕನ್ನಡ ಚಿತ್ರರಂಗಕ್ಕೆ ಯಜಮಾನ ಇಲ್ಲದಿರುವುದೇ ಸಮಸ್ಯೆಗಳಿಗೆ ಕಾರಣ. ಚಿತ್ರರಂಗವನ್ನು ಈಗ ಶಿವರಾಜ್‌ಕುಮಾರ್ ಮುನ್ನಡೆಸಲು ನೇತೃತ್ವ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಾವೆಲ್ಲ ಸಹಕಾರ ಕೊಡಬೇಕು ಎಂದರು.
ಕನ್ನಡ ಚಿತ್ರರಂಗ ಈಗ ನಾವಿಕನಿಲ್ಲದ ಹಡಗು.. ನಿರ್ಮಾಪಕ ಸಂದೇಶ್ ನಾಗರಾಜ್ ಬೇಸರ - ನಟ-ನಟಿಯರ ಡ್ರಗ್ ಲಿಂಗ್ ಪ್ರಕರಣ
ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇದ್ದಾಗ ಒಂದು ಭಯ ಇತ್ತು. ಅವರ ಮೇಲಿನ ಗೌರವಕ್ಕೆ ಹೆದರಿ ಯಾರೂ ದಾರಿ ತಪ್ಪುತ್ತಿರಲಿಲ್ಲ..
ಸ್ಯಾಂಡಲ್ವುಡ್ ಡ್ರಂಗ್ ಲಿಂಕ್ ಪ್ರಕರಣ
ಡ್ರಗ್ಸ್ ದಂಧೆ ಪ್ರಕರಣದಲ್ಲಿ ಇಡೀ ಚಿತ್ರರಂಗವನ್ನು ಕೆಟ್ಟ ರೀತಿ ನೋಡುವುದು ಸರಿಯಲ್ಲ . ತಪ್ಪಿತಸ್ಥರು ಯಾರು ಎಂಬುವುದನ್ನು ಹೇಳಿದರೆ ಚಿತ್ರರಂಗದ ಕಳಂಕ ತಪ್ಪುತ್ತದೆ. ಇಲ್ಲಿ ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬುದು ಸುಳ್ಳು. ಯಾರೋ ಶೇ.1ರಷ್ಟು ಮಂದಿ ತೆಗೆದುಕೊಳ್ಳಬಹುದು. ಯಾರು ತೆಗೆದುಕೊಳ್ಳುತ್ತಾರೆ ಎಂಬುವುದರ ಬಗ್ಗೆ ಮಾಹಿತಿ ಇದ್ದರೆ ಇಂದ್ರಜಿತ್ ಅವರು ಒಪನ್ ಆಗಿ ಹೇಳಲಿ, ಅವರಿಗೆ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಚಿತ್ರರಂಗವನ್ನು ದೂರುವುದು ತಪ್ಪು. ಈಗ ವಾಣಿಜ್ಯ ಮಂಡಳಿ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.