ಕರ್ನಾಟಕ

karnataka

ETV Bharat / sitara

ಪಡ್ಡೆ ಹುಲಿ ಶೋ ಮಿಸ್ಸಿಂಗ್​... ಬುಕ್ ಮೈ ಶೋ ವಿರುದ್ಧ ಗುಡುಗಿದ ನಿರ್ಮಾಪಕ ಕೆ.ಮಂಜು - undefined

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ 'ಪಡ್ಡೆಹುಲಿ' ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಚಿತ್ರ ಮೆಚ್ಚುಗೆಗೆ ಕೂಡಾ ಪಾತ್ರವಾಗಿದೆ.

ಪುತ್ರ ಶ್ರೇಯಸ್ ಜೊತೆಗೆ ಕೆ.ಮಂಜು

By

Published : Apr 23, 2019, 5:04 PM IST

'ಪಡ್ಡೆಹುಲಿ' ಚಿತ್ರದ ಸಕ್ಸಸ್​​​ ಬಗ್ಗೆ ಖುಷಿ ಹಂಚಿಕೊಳ್ಳಲು ಚಿತ್ರತಂಡ ಇಂದು ಪ್ರೆಸ್​​ಮೀಟ್ ಏರ್ಪಡಿಸಿತ್ತು. ಪ್ರೆಸ್​​ಮೀಟ್​ನಲ್ಲಿ ಮಾತನಾಡಿದ ಕೆ. ಮಂಜು 'ಪಡ್ಡೆಹುಲಿ' ಸಿನಿಮಾ ಚೆನ್ನಾಗಿದೆ, ಆದರೆ ಈ ಸಿನಿಮಾವನ್ನು ಬುಕ್ ಮೈ ಶೋನವರು ತುಳಿಯುತ್ತಿದ್ದಾರೆ. ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷನಾಗಿದ್ದರೂ ಕೂಡಾ ನಮಗೆ ಬುಕ್ ಮೈ ಶೋ ಹಾಗೂ ಚಿತ್ರಮಂದಿರಗಳು ಸಿಗದೆ ಇರುವುದು ಬೇಸರ ಉಂಟು ಮಾಡಿದೆ. ಕೂಡಲೇ ಸರ್ಕಾರ ಬುಕ್ ಮೈ ಶೋ ಸಂಸ್ಥೆಯಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಹಾಗೂ ಫಿಲ್ಮ್ ಚೇಂಬರ್ ಈ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

'ಪಡ್ಡೆಹುಲಿ' ಚಿತ್ರದ ಪ್ರೆಸ್​​ಮೀಟ್​​​​​​

ನಂತರ ಶ್ರೇಯಸ್ ಹಾಗೂ ನಿಶ್ಚಿಕಾ ನಾಯ್ಡು ಮಾತನಾಡಿ, ಸಿನಿಮಾ ಚೆನ್ನಾಗಿದೆ ಎಲ್ಲರೂ ಇನ್ನಷ್ಟು ಸಪೋರ್ಟ್ ಮಾಡಿ ಎಂದು ಮನವಿ ಮಾಡಿದರು. ಚಿತ್ರದ ನಿರ್ದೇಶಕ ಗುರುದೇಶಪಾಂಡೆ ಕೂಡಾ ಫಿಲ್ಮ್​ ಚೇಂಬರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅದ್ದೂರಿ ವೆಚ್ಚದಲ್ಲಿ ಸಿನಿಮಾವನ್ನು‌ ನಿರ್ಮಿಸಿದ್ದ ರಮೇಶ್ ರೆಡ್ಡಿ ಕೂಡಾ ಸಿನಿಮಾ ಕಲೆಕ್ಷನ್​​ನಲ್ಲಿ ಹಿಂದೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಮೇಲೆ ಬುಕ್ ಮೈ ಶೋ ಹಾಗೂ ಚಿತ್ರಮಂದಿರಗಳ ಸವಾರಿ ಜೋರಾಗಿದ್ದು ಇದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿರುವುದಂತೂ ನಿಜ.

'ಪಡ್ಡೆಹುಲಿ' ಚಿತ್ರತಂಡ

For All Latest Updates

TAGGED:

ABOUT THE AUTHOR

...view details