ಕರ್ನಾಟಕ

karnataka

ETV Bharat / sitara

ಮೃತ ಫೈಟರ್​ ವಿವೇಕ್ ಮನೆಗೆ ಲವ್​ ಯೂ ರಚ್ಚು ನಿರ್ಮಾಪಕ ಭೇಟಿ: ₹5 ಲಕ್ಷ ಚೆಕ್ ವಿತರಣೆ - ಮೃತ ಫೈಟರ್​ ವಿವೇಕ್​ ಕುಟುಂಬಕ್ಕೆ ಚೆಕ್​ ವಿತರಣೆ

ಸಿನಿಮಾದ ಶೂಟಿಂಗ್​ ವೇಳೆ ಅವಘಡ ನಡೆದ ನಾಲ್ಕನೇ ದಿನಕ್ಕೆ ನಿರ್ಮಾಪಕ ಗುರುದೇಶಪಾಂಡೆ ಪತ್ನಿ ಪ್ರತಿಕಾ ದೇಶಪಾಂಡೆ ಪ್ರೆಸ್ ಮೀಟ್ ಕರೆದಿದ್ದರು. ಆಗ ಮೃತನ ಕುಟುಂಬಕ್ಕೆ 5 ಲಕ್ಷದ ಚೆಕ್ ಅನ್ನು ಕೊಡುವುದಾಗಿ ಹೇಳಿದ್ರು.

producer-gurudeshapande-visits-fighter-vivek-house
ವಿವೇಕ್ ಮನೆಗೆ 'ಲವ್​ ಯೂ ರಚ್ಚು' ನಿರ್ಮಾಪಕ ಭೇಟಿ

By

Published : Sep 1, 2021, 10:58 PM IST

ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ನಡೆದ ವಿದ್ಯುತ್ ಅವಘಡದಲ್ಲಿ ಫೈಟರ್ ವಿವೇಕ್ ಮತಪಟ್ಟಿದ್ದರು. ನಂತರ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.

ಲವ್​ ಯೂ ರಚ್ಚು ಸಿನೆಮಾ ಪೋಸ್ಟರ್

ಇದೀಗ ಮಾಧ್ಯಮಗಳ ಎದುರು ಕಾಣಿಸಿಕೊಂಡಿರುವ ಚಿತ್ರದ ನಿರ್ಮಾಪಕ ಮೃತ ವಿವೇಕ್ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಅವರ ಕುಟುಂಬಕ್ಕೆ ನೀಡಿದ್ದಾರೆ.

ಸಿನೆಮಾದ ಶೂಟಿಂಗ್​ ವೇಳೆ ಅವಘಡ ನಡೆದ ನಾಲ್ಕನೇ ದಿನಕ್ಕೆ ನಿರ್ಮಾಪಕ ಗುರುದೇಶಪಾಂಡೆ ಪತ್ನಿ ಪ್ರತಿಕಾ ದೇಶಪಾಂಡೆ ಪ್ರೆಸ್ ಮೀಟ್ ಕರೆದಿದ್ದರು. ಆಗ ಮೃತನ ಕುಟುಂಬಕ್ಕೆ 5 ಲಕ್ಷದ ಚೆಕ್ ಅನ್ನು ಕೊಡುವುದಾಗಿ ಹೇಳಿದ್ರು. ಆದ್ರೆ, ಇದುವರೆಗೂ ಚಿತ್ರತಂಡದವರು ಮೃತರ ಕುಟುಂಬಕ್ಕೆ ನೆರವು ನೀಡಿಲ್ಲವೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ವಿವೇಕ್ ತಾಯಿ ಉಮಾ ಕಣ್ಣೀರಿಟ್ಟಿದ್ದರು.

ಈ ಪ್ರಕರಣ ಸಂಬಂಧ ನಿರ್ಮಾಪಕ ಗುರುದೇಶಪಾಂಡೆ ನಾಪತ್ತೆಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಜಾಮೀನು ಪಡೆದಿರುವ ಅವರು, ಮಾಗಡಿ ರಸ್ತೆಯಲ್ಲಿರೋ ವಿವೇಕ್ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.

ಇನ್ನೂ ಓದಿ:ಸ್ಯಾಂಡಲ್​ವುಡ್​ ಡ್ರಗ್​ ಕೇಸ್: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ಅರೆಸ್ಟ್

ABOUT THE AUTHOR

...view details