ಕರ್ನಾಟಕ

karnataka

ETV Bharat / sitara

ಡಿಜಿಟಲ್​​ ಪ್ಲಾಟ್​​​ಫಾರ್ಮ್​ನಿಂದ​ ಕನ್ನಡ ಸಿನಿಮಾ ನಿರ್ಮಾಪಕರಿಗೆ ಸುಗ್ಗಿಯ ಕಾಲ

ಕನ್ನಡದ ಸುಮಾರು 250 ಸಿನಿಮಾಗಳನ್ನು ‘ನೆಟ್​​​​ಫ್ಲಿಕ್ಸ್​​​​​​​​​​​​​, ಅಮೆಜಾನ್, ಜಿಯೋ ಅಂತಹ ಡಿಜಿಟಲ್ ವ್ಯಾಪಾರಸ್ಥರು ಅವುಗಳ ಹಕ್ಕುಗಳನ್ನು ಖರೀದಿಸಲು ಸಜ್ಜಾಗಿದ್ದಾರೆ. ಈ ಹೊಸ ಪ್ಲಾಟ್​​​​​​​​​​​​​​​​​​ಫಾರ್ಮ್​ನಿಂದ ನಿರ್ಮಾಪಕರಿಗೆ ಬಹಳ ಅನುಕೂಲವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

By

Published : Mar 21, 2019, 9:28 AM IST

ಕನ್ನಡ ಸಿನಿಮಾಗಳಿಗೆ ಡಿಜಿಟಲ್ ಹಕ್ಕುಗಳ ಮಾರಾಟದ ಹೊಸ ಪ್ಲಾಟ್​​​​​​​​​​​ಫಾರ್ಮ್ ಉದ್ಭವ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಮತ್ತು ಡಿಜಿಟಲ್ ಹಕ್ಕು ನೀಡದೆ ಇರುವ ಸಿನಿಮಾಗಳಿಗೆ ಆದಾಯ ಗಳಿಸುವ ಒಂದು ಹೊಸ ಮಾರ್ಗ ಸಿಕ್ಕಿರುವುದಂತೂ ನಿಜ.

ಈಗಾಗಲೇ 250 ಕನ್ನಡ ಸಿನಿಮಾಗಳ ಪಟ್ಟಿ ತಯಾರಾಗಿದೆ. ಈ ಸಿನಿಮಾ ನಿರ್ಮಾಪಕರು ವಿವಿಧ ಹಕ್ಕುಗಳನ್ನು ಟಿವಿ ವಾಹಿನಿಗೆ ನೀಡಿ, ಡಬ್ಬಿಂಗ್ ಹಕ್ಕುಗಳನ್ನೂ ಮಾರಿದ್ದರೂ ಕೂಡಾ ‘ನೆಟ್​​​​ಫ್ಲಿಕ್ಸ್​​​​​​​​​​​​​, ಅಮೆಜಾನ್, ಜಿಯೋ ಅಂತಹ ಡಿಜಿಟಲ್ ವ್ಯಾಪಾರಸ್ಥರು ಅವುಗಳ ಹಕ್ಕುಗಳನ್ನು ಖರೀದಿಸಲು ಸಜ್ಜಾಗಿದ್ದಾರೆ.

ಕನ್ನಡದ 250 ಸಿನಿಮಾಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ವಾಣಿಜ್ಯ ಮಂಡಳಿ ವತಿಯಿಂದ ಡಿಜಿಟಲ್ ಹಕ್ಕು ಪಡೆಯುವವರ ಮುಂದೆ ಇಡಲಾಗುವುದು. ಇದರಿಂದ ಕನ್ನಡ ಸಿನಿಮಾ ನಿರ್ಮಾಪಕರಿಗೆ ಎಲ್ಲಾ ರೀತಿಯಲ್ಲಿ ಹಕ್ಕುಗಳನ್ನು ಕೊಟ್ಟಿದ್ದರೂ ಈ ಡಿಜಿಟಲ್ ಪ್ಲಾಟ್​​​​​​​​​​​​​​​​​​​ಫಾರ್ಮ್ ಒಂದು ರೀತಿ ಸಮಾಧಾನಕರ ಬಹುಮಾನ ಇದ್ದಂತೆ. ಈಗ ಕಡಿಮೆ ಬಜೆಟಿನ ಸಿನಿಮಾಗಳಿಗೆ 25 ಲಕ್ಷದಿಂದ ಡಿಜಿಟಲ್ ಹಕ್ಕು ಸಂದಾಯ ಆಗುತ್ತಿದೆ. ಕೆಲವು ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ನೀಡಲಾಗಿದೆ. ಡಿಜಿಟಲ್ ವ್ಯಾಪಾರಸ್ಥರಿಗೆ ಬೇಕಾಗಿರುವುದು ಒಳ್ಳೆಯ ಸಾಫ್ಟ್​​ವೇರ್. ಅದು ಅವರಿಗೆ ಸಿನಿಮಾಗಳ ಮೂಲಕ ಸಿಕ್ಕುವುದು ದೊಡ್ಡ ಅನುಕೂಲ.

ಡಿಜಿಟಲ್ ಪ್ಲಾಟ್​​​​​​ಫಾರ್ಮ್ ವಾಹಿನಿಗಳಂತೆ ನಿಗದಿತ ದಿನಾಂಕದಲ್ಲಿ ಆಯಾ ಚಿತ್ರಗಳ ಪ್ರಸಾರ ಮಾಡಲಾಗುತ್ತದೆ. ನೀಡಿದ ಮೊತ್ತಕ್ಕೆ ನಿರ್ಮಾಪಕರು ಜಾಹೀರಾತು ಮುಖಾಂತರ ಹಣ ಸಂಪಾದಿಸುತ್ತಾರೆ. ಈ ಕಾರ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಗಲಿದೆ ಎಂದು ಹಿರಿಯ ನಿರ್ಮಾಪಕ, ವಾಣಿಜ್ಯ ಮಂಡಳಿಯಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ ಉಮೇಶ್ ಬಣಕರ್ ಹೇಳಿದ್ದಾರೆ.

ABOUT THE AUTHOR

...view details