ಇತ್ತೀಚಿನ ದಿನಗಳಲ್ಲಿ ಬುಕ್ ಮೈ ಶೋ ಕನ್ನಡ ಚಿತ್ರಗಳಿಗೆ ರೇಟಿಂಗ್ಸ್ ಕೊಡದೇ ಕನ್ನಡ ನಿರ್ಮಾಪಕರನ್ನು ಹಣಕ್ಕಾಗಿ ಪೀಡಿಸುತ್ತಾರೆ ಎಂಬ ಆರೋಪ ಹೆಚ್ಚಾಗಿ ಕೇಳಿ ಬರ್ತಿದೆ. ಅಲ್ಲದೆ ಇದಕ್ಕೆ ಪೂರಕವೆಂಬಂತೆ ಇತ್ತೀಚಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ಲವ್ ಮಾಕ್ಟೈಲ್, ಬಿಲ್ ಗೇಟ್ಸ್, ಸಾಗುತ ದೂರ ದೂರ ಚಿತ್ರತಂಡಗಳು ಬುಕ್ ಮೈ ಶೋ ವಿರುದ್ಧ ಗಂಭೀರ ಆರೋಪ ಮಾಡಿದ್ರು.
12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಬಗ್ಗೆ ಮಾತನಾಡಿದ ಸುನೀಲ್ ಪುರಾಣಿಕ್ ಬುಕ್ ಮೈ ಶೋಗೆ ಹಣ ಕೊಟ್ಟವರಿಗೆ 85-90 ರೇಟಿಂಗ್ಸ್ ಕೊಡ್ತಾರೆ. ಅವರಿಗೆ ಹಣ ಕೊಟ್ಟಿಲ್ಲ ಅಂದ್ರೆ ರೇಟಿಂಗ್ ಕೊಡಲ್ಲ. ಅದರಲ್ಲೂ ಕನ್ನಡ ಚಿತ್ರಗಳಿಗೆ ಬುಕ್ ಮೈ ಶೋದವರು ತುಂಬಾ ತೊಂದರೆ ಕೊಡ್ತಾರೆ ಎಂದು ಅರೋಪಿಸಿ ಇತ್ತೀಚಿಗೆ ಸಾಗುತ ದೂರ ದೂರ ಚಿತ್ರತಂಡ ಬುಕ್ ಮೈ ಶೋ ಕಚೇರಿ ಬಳಿ ಪ್ರತಿಭಟನೆ ಕೂಡ ಮಾಡಿದ್ರು.
ಆದ್ರೆ ಈಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬೆಂಗಳೂರಿನಲ್ಲಿ ನಡೆಯುವ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಟಿಕೆಟ್ ಬುಕಿಂಗ್ ಮಾಡಲು ಆಯೋಜಕರು ಬುಕ್ ಮೈ ಶೋ ಜೊತೆ ಒಡಂಬಡಿಕೆ ಮಾಡಿ ಕೊಂಡಿರುವುದು ಚಿತ್ರರಂಗದ ಒಂದಷ್ಟು ಮಂದಿಯ ಕಣ್ಣು ಕೆಂಪಗಾಗಿಸಿದೆ.
ಕನ್ನಡ ಚಿತ್ರಗಳಿಗೆ ತೊಂದರೆ ಕೊಡುವ ಬುಕ್ ಮೈ ಶೋ ಜೊತೆ ಅಕಾಡೆಮಿ ಕೈ ಜೋಡಿಸಿರುವುದಕ್ಕೆ ಚಿತ್ರರಂಗದಲ್ಲಿ ಅಸಮಾಧಾನ ವ್ಯಕ್ತವಾಗ್ತಿದೆ. ಇನ್ನು ಈ ಅಸಮಾಧಾನಕ್ಕೆ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಅಕಾಡಮಿ ಪಾತ್ರ ಏನು ಇಲ್ಲ. ನಾನು ಅಧ್ಯಕ್ಷನಾಗೋಕೆ ಮುಂಚಿತವಾಗಿ ಸರ್ಕಾರ ಬುಕ್ ಮೈ ಶೋ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಬುಕ್ ಮೈ ಶೋ ವಿರುದ್ಧ ಕೆಲವರಿಗೆ ಅಸಮಾಧಾನ ಇರಬಹುದು. ಅದ್ರೆ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸುನೀಲ್ ಪುರಾಣಿಕ್ ಹೇಳಿದ್ರು.