ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಫ್ರೆಂಚ್ ಬಿರ್ಯಾನಿ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್ನಲ್ಲಿ ಬಿಡುಯಾಗಲಿದೆ ಎಂದು ಇತ್ತೀಚೆಗಷ್ಟೇ ಪಿಆರ್ಕೆ ಪ್ರೋಡಕ್ಷನ್ ಹೇಳಿತ್ತು. ಇದೀಗ ಅದೇ ರೀತಿ ಪಿಅರ್ಕೆ ಪ್ರೊಡಕ್ಷನ್ನ ಮತ್ತೊಂದು ಚಿತ್ರ ಒಟಿಟಿ ಪ್ಲಾಟ್ ಫಾರ್ಮ್ನಲ್ಲಿಯೇ ಬಿಡುಗಡೆಗೆ ಸಿದ್ಧವಾಗಿದೆ.
ಹೌದು, ಪಿಆರ್ಕೆ ಪ್ರೋಡಕ್ಷನ್ನಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರ ಅಭಿನಯಿಸಿರುವ "ಲಾ" ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗಲಿದೆ.