ಪಾಪ್ ಕಾರ್ನ್ ಮಂಕಿ ಟೈಗರ್ ಸ್ಯಾಂಡಲ್ವುಡ್ ಅಂಗಳದಲ್ಲಿ ತುಂಬಾ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಟಗರು ಹಿಟ್ ಆದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೊತೆಯಾಗಿ ಮಾಡಿರೋ ಸಿನಿಮಾ ಇದು.
ಬರೀ ಪೋಸ್ಟರ್ನಿಂದಲೇ ಸುದ್ದಿ ಮಾಡಿದ್ದ ಈ ಚಿತ್ರ, ಡಬ್ಬಿಂಗ್ ವಿಡಿಯೋಗಳಿಂದಲೂ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇನ್ನು ಡಾಲಿ ಧನಂಜಯ ಡೈಲಾಗ್ ಡಬ್ಬಿಂಗ್ ಮಾಡ್ತಿರೋ ಸಂದರ್ಭದಲ್ಲಿ ಮಾಡಿದ್ದ ಮೇಕಿಂಗ್ ವಿಡಿಯೋಗಳು ಸಖತ್ ವೈರಲ್ ಆಗಿದ್ವು. ಈ ನಡುವೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡದಿಂದ ಮತ್ತೊಂದು ಬಿಗ್ ನ್ಯೂಸ್ ಹೊರ ಬಿದಿದ್ದೆ. ಅದೇನಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾಕ್ಕೆ ಸಾಥ್ ನೀಡುತ್ತಿದ್ದಾರೆ.