ಕರ್ನಾಟಕ

karnataka

ETV Bharat / sitara

ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಭಾಗಿಯಾದ ಪ್ರಿಯಾಂಕ ಉಪೇಂದ್ರ - Priyanka action sequences

ಪ್ರಿಯಾಂಕ ಉಪೇಂದ್ರ 'ಉಗ್ರಾವತಾರ' ಚಿತ್ರದಲ್ಲಿ ಪೊಲೀಸ್ ಇನ್ಸ್​​ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯಗಳು ನೈಜವಾಗಿ ಬರಲಿ ಎಂಬ ಉದ್ದೇಶಕ್ಕೆ ಪ್ರಿಯಾಂಕ ಸಾಹಸ ನಿರ್ದೇಶಕ ರವಿ ಅವರಿಂದ ತರಬೇತಿ ಪಡೆದು, ಡ್ಯೂಪ್ ಇಲ್ಲದೆ ತಾವೇ ಆ್ಯಕ್ಟಿಂಗ್ ಮಾಡುತ್ತಿದ್ದಾರೆ.

Priyanka Upendra stunt
ಪ್ರಿಯಾಂಕ ಉಪೇಂದ್ರ

By

Published : Oct 9, 2020, 9:02 AM IST

ಕೊರೊನಾ ಲಾಕ್​​​​ಡೌನ್​​ನಿಂದ ಮನೆಯಲ್ಲಿದ್ದ ಸೆಲಬ್ರಿಟಿಗಳು ಡಯಟ್, ವರ್ಕೌಟ್ ಮಾಡಿ ಮೊದಲಿಗಿಂತ ಫಿಟ್ ಆಗಿದ್ದಾರೆ. ಪ್ರಿಯಾಂಕ ಉಪೇಂದ್ರ ಕೂಡಾ ಈ ಲಾಕ್​​ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಸಖತ್ ಫಿಟ್ ಆಗಿದ್ದಾರೆ. ಇದೀಗ ಪ್ರಿಯಾಂಕ ತಮ್ಮ ಹೊಸ ಸಿನಿಮಾ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ.

'2nd ಹಾಫ್' ಚಿತ್ರದಲ್ಲಿ ಪ್ರಿಯಾಂಕ, ಪೊಲೀಸ್ ಕಾನ್ಸ್​​ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರಿಗೆ ಪ್ರಮೋಷನ್ ದೊರೆತಿದೆ. 'ಉಗ್ರಾವತಾರ' ಚಿತ್ರದಲ್ಲಿ ಪ್ರಿಯಾಂಕ ಇನ್ಸ್​​​​​​ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಡ್ಯೂಪ್ ಇಲ್ಲದೆ ಸ್ವತ: ಪ್ರಿಯಾಂಕ ಅವರೇ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನ ಹೆಚ್​​​​​ಎಂಟಿ ಲೇ ಔಟ್​​​​ನಲ್ಲಿ ಇತ್ತೀಚೆಗೆ ನಡೆದ ಚಿತ್ರದ ಆ್ಯಕ್ಷನ್ ಸನ್ನಿವೇಶಗಳಲ್ಲಿ ಪ್ರಿಯಾಂಕ ಉಪೇಂದ್ರ ಯಾವುದೇ ಡ್ಯೂಪ್ ಇಲ್ಲದೆ ಭಾಗವಹಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಎದುರು ಸುಮನ್, ಜಾಕಿ ಶ್ರಾಫ್, ಆಶಿಷ್ ವಿದ್ಯಾರ್ಥಿಯಂತ ದೊಡ್ಡ ಕಲಾವಿದರು ಖಳನಟರಾಗಿ ಅಭಿನಯಿಸಿದ್ದಾರೆ. ಚಿತ್ರದ ಆ್ಯಕ್ಷನ್ ಸನ್ನಿವೇಶಗಳು ನೈಜವಾಗಿ ಬರಲಿ ಎಂಬ ಕಾರಣಕ್ಕೆ ಪ್ರಿಯಾಂಕ, ಸಾಹಸ ಕಲಾವಿದ ರವಿ ಅವರಿಂದ ತರಬೇತಿ ಪಡೆದಿದ್ದಾರಂತೆ.

ಪ್ರಿಯಾಂಕ ಉಪೇಂದ್ರ

ಒಂದು ಕೊಲೆ ಸುತ್ತ ನಡೆಯುವ ಪತ್ತೆದಾರಿ ಅಂಶಗಳನ್ನು 'ಉಗ್ರಾವತಾರ' ಸಿನಿಮಾ ಹೊಂದಿದೆ. ತನಿಖೆ ಮಾಡುತ್ತಿದ್ದಂತೆ ಹೊಸ ಹೊಸ ವಿಚಾರಗಳು ತೆರೆದುಕೊಳ್ಳುತ್ತದೆ. ಅಪರಾಧಿಗಳ ವಿರುದ್ಧ ಉಗ್ರಾವತಾರ ತಾಳುವ ನಾಯಕಿ, ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಎಂದು ಸಾರುವುದೇ ಈ ಚಿತ್ರದ ಸಂದೇಶವಾಗಿದೆ.

ಗುರುಮೂರ್ತಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಿನಾಲ್ ರಾಜ್​ ಬರೆದ 4 ಹಾಡುಗಳಿಗೆ ರವಿ ಬಸ್ರೂರ್ ಸಹೋದರ ರಾಧಾಕೃಷ್ಣ ಬಸ್ರೂರ್ ರಾಗ ಸಂಯೋಜನೆ ಮಾಡಲಿದ್ದಾರೆ. ನಂದಕುಮಾರ್ ಛಾಯಾಗ್ರಹಣವಿರುವ 'ಉಗ್ರಾವತಾರ' ಚಿತ್ರವನ್ನು ಎಂ.ಕೆ. ಪಿಕ್ಚರ್ಸ್​ ಬ್ಯಾನರ್ ಅಡಿ ಚಿಕ್ಕಬಳ್ಳಾಪುರದ ರಿಯಲ್ ಎಸ್ಟೇಟ್ ಉದ್ಯಮಿ ಮುನಿಕೃಷ್ಣ ನಿರ್ಮಿಸುತ್ತಿದ್ದಾರೆ.

ABOUT THE AUTHOR

...view details