ಎರಡು ಮಕ್ಕಳ ತಾಯಿ ಅದರೂ ಸ್ಯಾಂಡಲ್ವುಡ್ನಲ್ಲಿ ಮೊದಲಿನಷ್ಟೇ ಬೇಡಿಕೆ ಉಳಿಸಿಕೊಂಡಿರುವ ನಟಿಯರಲ್ಲಿ ಪ್ರಿಯಾಂಕ ಉಪೇಂದ್ರ ಕೂಡಾ ಒಬ್ಬರು. ಪ್ರಿಯಾಂಕ ಇತ್ತೀಚೆಗೆ ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
ಪ್ರಿಯಾಂಕ ಉಪೇಂದ್ರ ಸ್ಪೆಷಲ್ ಬರ್ತ್ಡೇ ಆಚರಣೆ ವಿಡಿಯೋ ರಿವೀಲ್ - Priyanka Upendra Birthday 43th Birthday
ನವೆಂಬರ್ 12 ರಂದು ಸ್ಯಾಂಡಲ್ವುಡ್ ನಟಿ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ರೆಕಾರ್ಡ್ ಮಾಡಲಾದ ವಿಡಿಯೋವೊಂದು ಈಗ ರಿವೀಲ್ ಆಗಿದೆ.
ನವೆಂಬರ್ 12 ರಂದು ಪ್ರಿಯಾಂಕ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಮುಂಬರುವ ಸಿನಿಮಾಗಳ ಚಿತ್ರತಂಡ ಕೇಕ್, ಗಿಫ್ಟ್ ತಂದು ಶುಭ ಕೋರುವ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಇದರೊಂದಿಗೆ ಸ್ಪೆಷಲ್ ಕೇಕ್ ಪ್ಯಾಲೇಸ್ ಕೂಡಾ ಪ್ರಿಯಾಂಕ ಕುಟುಂಬದ ಜೊತೆ ಸೇರಿ ವಿಶೇಷವಾಗಿ ಬರ್ತ್ಡೇ ಆಚರಿಸಿಕೊಂಡಿರುವ ವಿಡಿಯೋ ಈಗ ರಿವೀಲ್ ಆಗಿದೆ. ಈ ಸಮಯದಲ್ಲಿ ಉಪೇಂದ್ರ, ತಂದೆ ತಾಯಿ, ಪ್ರಿಯಾಂಕ, ಅವರ ತಾಯಿ, ಮಕ್ಕಳಾದ ಆಯುಷ್ ಹಾಗೂ ಐಶ್ವರ್ಯ ಹಾಜರಿದ್ದರು. ಕತ್ರಿಗುಪ್ಪೆ ನಿವಾಸದಲ್ಲಿ ಪ್ರಿಯಾಂಕ ತಮ್ಮ ಹುಟ್ಟುಹಬ್ಬ ಆಚರಿಸಿದ್ದು ಕ್ಯಾಮ್ ಫೋಟೋಗ್ರಫಿ ತಂಡ ಪ್ರಿಯಾಂಕ ಅವರ ಹುಟ್ಟುಹಬ್ಬದ ಸವಿ ನೆನಪುಗಳನ್ನು ಚಿತ್ರಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.