ಸ್ಯಾಂಡಲ್ವುಡ್ನಲ್ಲಿ ಗ್ಲಾಮರ್ ಹಾಗೂ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ನಟಿ ಪ್ರಿಯಾಂಕಾ ಉಪೇಂದ್ರ. ಹೆಚ್ಚಾಗಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ ಉಪೇಂದ್ರಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಉಪೇಂದ್ರ ಆಕ್ಷನ್ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿರುವ ಉಗ್ರಾವತಾರ ಸಿನಿಮಾದ ಮೋಷನ್ ಪೋಸ್ಟರ್ ಅನಾವರಣ ಮಾಡಲಾಗಿದೆ.
ಉಗ್ರಾವತಾರ ತಾಳಿದ ಪ್ರಿಯಾಂಕ ಉಪೇಂದ್ರ ಸ್ಪೆಷಲ್ ಅಂದ್ರೆ ಪ್ರಿಯಾಂಕಾ ಉಪೇಂದ್ರ ಪತಿ, ರಿಯಲ್ ಸ್ಟಾರ್ ಉಪೇಂದ್ರ ಈ ಉಗ್ರಾವತಾರ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಈ ಪೋಸ್ಟರ್ ನೋಡ್ತಾ ಇದ್ರೆ, ಮಾಲಾಶ್ರೀ ಸಿನಿಮಾಗಳು ನೆನಪಿಗೆ ಬರುತ್ತದೆಂದು ರಿಯಲ್‌ಸ್ಟಾರ್ ಉಪೇಂದ್ರ ಹೇಳಿದರು. ಪ್ರಿಯಾಂಕ ಉಪೇಂದ್ರ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಂಡಿರೋದು ನನಗೆ ಕುತೂಹಲ ಇದೆ ಎಂದರು.
ಉಗ್ರಾವತಾರ ಪೋಸ್ಟರ್ ರಿಲೀಸ್ ಕಾರ್ಯಕ್ರಮ ಇನ್ನು ಲೇಡಿ ಸೂಪರ್ ಕಾಪ್ ಆಗಿ ಅಭಿನಯಿಸ್ತಾ ಇರೋ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಕಳೆದ ಹುಟ್ಟುಹಬ್ಬದಂದು ಇದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಈ ವರ್ಷ ಮೋಷನ್ ಪಿಕ್ಚರ್ ಸಿದ್ದಗೊಂಡಿದ್ದು ಸಂತಸ ತಂದಿದೆ. ನಿರ್ದೇಶಕರು ಕಥೆ ಹೇಳಿದಾಗ ಇದನ್ನು ಮಾಡಬಹುದಾ ಎಂಬುದಾಗಿ ಪ್ರಶ್ನೆ ಕಾಡಿತ್ತು. ಆದರೆ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಸಾಥ್ ನೀಡಿದ್ದರಿಂದ ಎಲ್ಲವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು.
'ಉಗ್ರಾವತಾರ' ತಾಳಿದ ಪ್ರಿಯಾಂಕಾ ಉಪೇಂದ್ರ : ಮೋಷನ್ ಪೋಸ್ಟರ್ ರಿಲೀಸ್ ಪ್ರಸಕ್ತ ಸಾಮಾಜಿಕ ವಿಷಯಗಳು, ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಾಹಸ ದೃಶ್ಯಗಳು ನೈಜವಾಗಿ ಬರಲೆಂದು ಡ್ಯೂಪ್ ಬಳಸದೆ ಇರುವುದರಿಂದ ಒಂದಷ್ಟು ತರಬೇತಿ ಪಡೆಯುತ್ತಿದ್ದೇನೆ. ಐಪಿಎಸ್ ಅಧಿಕಾರಿ ರೂಪ ನನಗೆ ಪ್ರೇರಣೆಯಾಗಿದ್ದಾರೆ. ಅಮ್ಮ, ತಮ್ಮ ಆಕಸ್ಮಿಕವಾಗಿ ಬಂದಿರುವುದು ಆಶ್ಚರ್ಯವಾಗಿದೆ ಎಂದು ಪ್ರಿಯಾಂಕ ಉಪೇಂದ್ರ ಖುಷಿ ಹಂಚಿಕೊಂಡರು.
ಈ ಚಿತ್ರವನ್ನ ನಿರ್ದೇಶಕ ಗುರುಮೂರ್ತಿ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಶೇಕಡ 30 ರಷ್ಟು ಚಿತ್ರೀಕರಣ ಮುಗಿದಿದೆ. ಮೂರು ಫೈಟ್ ಬಾಕಿ ಇದೆ. ರಸ್ತೆಯಲ್ಲಿ ಹೆಣ್ಣುಮಕ್ಕಳು ಹೋಗುತ್ತಿದ್ದರೆ ಅವರನ್ನು ಗೌರವದಿಂದ ಕಾಣಬೇಕು. ಏನಾದರೂ ಮಾಡಬೇಕು ಅನ್ನಿಸಬಾರದು. ಅದನ್ನೇ ಇದರಲ್ಲಿ ಹೇಳ ಹೊರಟಿದ್ದೇವೆ. ಕಿನ್ನಾಳ್ ರಾಜ್ ಈ ಚಿತ್ರಕ್ಕೆ ಸಂಭಾಷಣೆ, ಸಾಹಿತ್ಯ ಬರೆದಿದ್ದು, ವೀಣಾ ನಂದಕುಮಾರ್ ಈ ಸಿನಿಮಾಕ್ಕೆ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಸಮಾಜಕ್ಕೆ ಹತ್ತಿರವಾಗಿರುವ ಕಥೆಯನ್ನ ಒಳಗೊಂಡಿರುವ, ಉಗ್ರಾವತಾರ ಸಿನಿಮಾಕ್ಕೆ ನಿರ್ಮಾಪಕ ಎಸ್.ಜಿ. ಸತೀಶ ಹಣ ಹಾಕುತ್ತಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅಲ್ಲದೆ, ಸತ್ಯಪ್ರಕಾಶ್, ಸುಮನ್ ಮುಂತಾದವರು ನಟಿಸುತ್ತಿದ್ದಾರೆ. ಸದ್ಯ ಪೋಸ್ಟರ್ ನೋಡಿದವರೆಲ್ಲರೂ ವಾಹ್ ಅನ್ನುತ್ತಿದ್ದು, ಪ್ರಿಯಾಂಕಾ ಉಪೇಂದ್ರ ಉಗ್ರಾವತಾರ ತಾಳಿದ್ದು, ಡಿಸೆಂಬರ್ ಒಳಗೆ ಚಿತ್ರೀಕರಣ ಮುಗಿಸಿ, ಸಂಕ್ರಾಂತಿ ಹಬ್ಬದಂದು ಪ್ರೇಕ್ಷಕರ ಮುಂದೆ ಬರಲು ಚಿತ್ರತಂಡ ಪ್ಲಾನ್ ಮಾಡಿದೆ.