ಪ್ರಿಯಾಂಕ ಉಪೇಂದ್ರ ಒಂದಾದ ಮೇಲೆ ಒಂದು ಸಿನಿಮಾ ಪ್ರಕಟ ಮಾಡುವ ಮೂಲಕ ಸಖತ್ ಬ್ಯುಸಿ ಇದ್ದಾರೆ. ಅಲ್ಲದೆ ಚಿತ್ರೀಕರಣದಲ್ಲಿಯೂ ಭಾಗಿಯಾಗುತ್ತಿದ್ದಾರೆ. ಸದ್ಯ ಪ್ರಿಯಾಂಕ ನಟಿಸುತ್ತಿರುವ 1980 ಚಿತ್ರದ ಪ್ರಿಯಾಂಕರ ಫಸ್ಟ್ ಲುಕ್ ರಿವೀಲ್ ಆಗಿದೆ. ಕೆಂಪು ಸೀರೆಯುಟ್ಟು ರೆಟ್ರೋ ಶೈಲಿಯಲ್ಲಿ ಪ್ರಿಯಾಂಕ ಗಮನ ಸೆಳೆದಿದ್ದಾರೆ.
1980 : ರೆಟ್ರೋ ಲುಕ್ನಲ್ಲಿ ಪ್ರಿಯಾಂಕ ಉಪೇಂದ್ರ - Priyanka Upendra at Retro Look
ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ 1980 ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ..
![1980 : ರೆಟ್ರೋ ಲುಕ್ನಲ್ಲಿ ಪ್ರಿಯಾಂಕ ಉಪೇಂದ್ರ priyanka upendra in retro look](https://etvbharatimages.akamaized.net/etvbharat/prod-images/768-512-9584082-thumbnail-3x2-giri.jpg)
1980 ಚಿತ್ರವು ಟೈಟಲ್ನಿಂದಲೇ ಸಿನಿಮಾ ಬಗ್ಗೆ ಕ್ರೇಜ್ ಹುಟ್ಟಿಸಿದೆ. ಅಲ್ಲದೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಸದ್ಯ ಮಡಿಕೇರಿಯ ಸುಂದರ ತಾಣಗಳಲ್ಲಿ 1980 ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸಿನಿಮಾದ ಹೆಚ್ಚಿನ ಚಿತ್ರೀಕರಣ ಕೊಡಗಿನ ಭಾಗದಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
1990 ಚಿತ್ರಕ್ಕೆ ‘ಸವಾರಿ 2’, ‘ವಸಂತ ಕಾಲ’ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿರುವ, ರಾಜ್ ಕಿರಣ್ ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ. ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಮುಂತಾದವರು ನಟಿಸುತ್ತಿದ್ದಾರೆ.