ಮದುವೆ ನಂತರ ಸಿನಿಮಾಗಳಿಂದ ದೂರವೇ ಉಳಿದಿದ್ದ ಬಂಗಾಳಿ ಚೆಲುವೆ ಪ್ರಿಯಾಂಕಾ ಉಪೇಂದ್ರ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 1998 ರಲ್ಲಿ ಪ್ರಿಯಾಂಕಾ ಸಿನಿ ಕರಿಯರ್ ಆರಂಭಿಸಿದ್ದು ಬಂಗಾಳಿ ಸಿನಿಮಾದಿಂದಲೇ. ನಡುವೆ ಕೂಡಾ ಕೆಲವೊಂದು ಬಂಗಾಳಿ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಈಗ ಮತ್ತೆ 8 ವರ್ಷಗಳ ನಂತರ ತಮ್ಮ ಮಾತೃ ಭಾಷೆಯ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ.
ಬಹಳ ವರ್ಷಗಳ ನಂತರ ಮಾತೃ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ - Satyajit Ray novel based story
ಸಾಗ್ನಿಕ್ ಚಟರ್ಜಿ ನಿರ್ದೇಶಿಸುತ್ತಿರುವ 'ಮಾಸ್ಟರ್ ಅನ್ಶುಮಾನ್' ಎಂಬ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು 8 ವರ್ಷಗಳ ಬಳಿಕ ಪ್ರಿಯಾಂಕಾ ಉಪೇಂದ್ರ ಮಾತೃ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಧ್ರುವ-ನಂದಕಿಶೋರ್ ಕಾಂಬಿನೇಷನ್ನಲ್ಲಿ ಮತ್ತೆರಡು ಚಿತ್ರ..ಒಂದು 'ದುಬಾರಿ', ಮತ್ತೊಂದು ಯಾವುದು..?
ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಬರೆದಿರುವ 'ಮಾಸ್ಟರ್ ಅನ್ಶುಮಾನ್' ಎಂಬ ಕಾದಂಬರಿ ಆಧಾರಿತ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಸಿನಿಮಾಗೆ ಕೂಡಾ ಅದೇ ಹೆಸರು ಇಡಲಾಗಿದೆ. ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಾಗ್ನಿಕ್ ಚಟರ್ಜಿ ನಿರ್ದೇಶಿಸುತ್ತಿದ್ದಾರೆ. ಪ್ರಿಯಾಂಕಾ ಸದ್ಯಕ್ಕೆ ಕೊಲ್ಕತ್ತಾದಲ್ಲಿದ್ದು ಈ ಚಿತ್ರಕ್ಕಾಗಿ ಲುಕ್ ಟೆಸ್ಟ್ ಕೂಡಾ ನೀಡಿದ್ದಾರಂತೆ. ಅನ್ಶುಮಾನ್ ಎಂಬ ಹುಡುಗನ ಸುತ್ತ ಚಿತ್ರಕಥೆ ಸುತ್ತಲಿದೆಯಂತೆ. ಬಹುಶ: ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಮಧಾಬಿ ಸೇನ್ ಸೇರಿದಂತೆ ಬೆಂಗಾಳಿಯ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸಾಗ್ನಿಕ್ ಚಟರ್ಜಿ ಅವರಂತ ನಿರ್ದೇಶಕರೊಂದಿಗೆ ಕೆಲಸ ಮಾಡಲು ಅವಕಾಶ ದೊರೆತಿರುವುದು ನನಗೆ ಖುಷಿ ನೀಡಿದೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಅವರು ಉಗ್ರಾವತಾರ, ಸೆಂಟ್ ಮಾರ್ಕ್ಸ್ ರೋಡ್, ಖೈಮರಾ, 1980 ಸಿನಿಮಾಗಳಲ್ಲಿ ನಟಿಸಲಿದ್ದಾರೆ.