ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್ವುಡ್ನಲ್ಲಿ ನಡೆಯುತ್ತಲೇ ಇರ್ತಾವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ. ಇದೀಗ ಅಂಥದ್ದೇ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗಿದೆ. ಆ ಚಿತ್ರದ ಹೆಸರು ಫ್ಯಾಂಟಸಿ.
ಕಿರುತೆರೆ ಮತ್ತು ಬಿಗ್ಬಾಸ್ ಮೂಲಕ ಮನೆಮಾತಾಗಿರುವ ನಟಿ ಪ್ರಿಯಾಂಕಾ ಈ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದಲ್ಲೂ ಪ್ರಿಯಾಂಕಾ, ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 3ರಲ್ಲಿ ಅಂತಿಮ ಹಂತ ತಲುಪಿದ್ದ ಸ್ಪರ್ಧಿ ಅನುರಾಗ್ ಫ್ಯಾಂಟಸಿ ಸಿನಿಮಾದ ಕೇಂದ್ರ ಬಿಂದು. ಈ ಚಿತ್ರದಲ್ಲಿ ಆತನ ಮಾನಸಿಕ ಸ್ಥಿತಿಗತಿ ಹೇಗೆಲ್ಲ ಬದಲಾಗುತ್ತದೆ. ಅದರಿಂದ ಎದುರಾಗುವ ಅನಾಹುತಗಳೇನು ಎಂಬುದೇ ಫ್ಯಾಂಟಸಿ ಚಿತ್ರದ ತಿರುಳು.
ಇನ್ನುಳಿದಂತೆ ಮೈಸೂರು ಬಾಲ, ಹರಿಣಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ 99 ಚಿತ್ರದಲ್ಲಿ ಯಂಗರ್ ಗಣೇಶ್ ಪಾತ್ರ ಮಾಡಿದ್ದ ಹೇಮಂತ್ ಮುಖ್ಯಭೂಮಿಕೆಯಲ್ಲಿದ್ದಾರೆ. ಪವನ್ ಡ್ರೀಮ್ ಫಿಲ್ಮ್ ಲಾಂಛನದಲ್ಲಿ ಸಿದ್ಧವಾಗಿರುವ ಫ್ಯಾಂಟಸಿ ಚಿತ್ರಕ್ಕೆ ಪವನ್ ಕುಮಾರ್ ಆರ್, ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.