ಕರ್ನಾಟಕ

karnataka

ETV Bharat / sitara

ಪ್ರಿಯಾಂಕಾ ಮತ್ತು ನಿಕ್​​ ಜೋನಸ್​​​ಗೆ 2ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ - ಪ್ರಿಯಾಂಕಾ ಮತ್ತು ನಿಕ್​​ ಜೋನಸ್​​​

ಬಾಲಿವುಡ್​​ ಬೆಡಗಿ ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 2 ವಸಂತಗಳು ಕಳೆದಿವೆ. 2018ರ ಡಿಸೆಂಬರ್‌ 1 ಮತ್ತು 2ರಂದು ಅಮೆರಿಕದ ಗಾಯಕ ನಿಕ್‌ ಜೋನಸ್‌ ಜೊತೆ ಅವರ ಮದುವೆಯಾಗಿದ್ದರು.

Priyanka, Nick Jonas gush over each other on their second wedding anniversary
ಪ್ರಿಯಾಂಕಾ ಮತ್ತು ನಿಕ್​​ ಜೋನಸ್​​​ಗೆ 2ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

By

Published : Dec 1, 2020, 9:10 PM IST

ಬಾಲಿವುಡ್​​ ಬೆಡಗಿ ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 2 ವರ್ಷ ಕಳೆದಿವೆ. 2018ರ ಡಿಸೆಂಬರ್‌ 1 ಮತ್ತು 2ರಂದು ಅಮೆರಿಕದ ಗಾಯಕ ನಿಕ್‌ ಜೋನಸ್‌ ಜೊತೆ ಅವರ ಮದುವೆಯಾಗಿದ್ದ ಈ ಜೋಡಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಈ ಬಗ್ಗೆ ಗಾಯಕ ನಿಕ್​ ಜೋನಸ್​​ ತಮ್ಮ ಪತ್ನಿಗೆ ಇನ್​ಸ್ಟಾಗ್ರಾಮ್​ನಲ್ಲಿ ವಿಶ್​​ ಮಾಡಿದ್ದಾರೆ, ಮದುವೆ ಕ್ಷಣದ ಫೋಟೋಗಳನ್ನು ಶೇರ್​​ ಮಾಡಿರುವ ನಿಕ್​​, ಮದುವೆಯಾಗಿ ಎರಡು ವರ್ಷ ಕಳೆದಿದೆ. ಪ್ರಿಯಾಂಗ ವಂಡರ್​ಫುಲ್​​, ಬ್ಯೂಟಿಫುಲ್​​ ಎಂದು ಬರೆದಿದ್ದು, ಕೊನೆಗೆ ಐ ಲವ್​ ಯು ಎಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಕೂಡ ಒಂದು ಫೋಟೋ ಹಾಕಿ, ಎರಡನೇ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದ್ದಾರೆ.

ABOUT THE AUTHOR

...view details