ಕುತೂಹಲಗಳ ಗಂಟಾಗಿರುವ ಬಿಗ್ ಬಾಸ್ ಮನೆಯಿಂದ ಮತ್ತೊಂದು ವಿಕೇಟ್ ಪತನವಾಗಿದೆ. ಪ್ರಿಯಾಂಕ ಈ ವಾರ ಎಲಿಮಿನೇಟ್ ಆಗಿದ್ದು, ಬಿಗ್ ಬಾಸ್ ಜರ್ನಿಯನ್ನು ಮುಗಿಸಿದ್ದಾರೆ.
ಇದನ್ನು ಬಿಟ್ಟರೆ ಸ್ಪರ್ಧಿಗಳಿಗೆ ಸುದೀಪ್ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಅದೇನಂದ್ರೆ, ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಇರುತ್ತದೆ. ಮಿಡ್‍ವೀಕಲ್ಲಿ ಎಲಿಮಿನೇಟ್ ಆಗುವ ಒಬ್ಬ ಸ್ಪರ್ಧಿ ಸುದೀಪ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಬದಲಿಗೆ ಫಿನಾಲೆ ದಿನ ಸುದೀಪ್ ಜೊತೆಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಜರ್ನಿ ಮುಗಿಸಿದ ಪ್ರಿಯಾಂಕ ನಿನ್ನೆ ರಾತ್ರಿ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಆರು ಸ್ಪರ್ಧಿಗಳಲ್ಲಿ ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಸೇಫ್ ಆಗಿದ್ದು, ಫಿನಾಲೆ ಹಂತಕ್ಕೆ ಕಾಲಿಟ್ಟಿದ್ದಾರೆ. ಹಾಗೂ ಮುಂದಿನ ವಾರ ನಡುರಾತ್ರಿಯಲ್ಲಿ ಒಬ್ಬರು ಮನೆಯಿಂದ ಹೋಗಲಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ಐದು ಮಂದಿ ಫಿನಾಲೆ ತಲುಪಲಿದ್ದಾರೆ.
ಬಿಗ್ ಬಾಸ್ ಜರ್ನಿ ಮುಗಿಸಿದ ಪ್ರಿಯಾಂಕ ಫಿನಾಲೆಗೆ ತಲುಪಿರುವ ವಾಸುಕಿ, ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ ಸೇರಿದಂತೆ, ಮನೆಯಲ್ಲಿ ಸದ್ಯ ಹರೀಶ್ ರಾಜ್, ಭೂಮಿಶೆಟ್ಟಿ ಹಾಗೂ ದೀಪಿಕಾ ಉಳಿದಿದ್ದು, ಇವರಿಗೆ ಢವ ಢವ ಶುರುವಾಗಿದೆ.