ಕರ್ನಾಟಕ

karnataka

ETV Bharat / sitara

ಬಿಕಿನಿಯಲ್ಲಿ ಮತ್ತೆ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ! - ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಮತ್ತೆ ತಮ್ಮ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ. ಸ್ಪೇನ್​ನಲ್ಲಿ ವೆಕೇಷನ್​ನಲ್ಲಿರುವ ನಟಿ ಅಲ್ಲಿ ಕೆಳದ ಒಂದು ಅದ್ಬುತವಾದ ದಿನದ ಕುರಿತಾಗಿ ನೆಟ್ಟಿಗರ ಜೊತೆ ಹಂಚಿಕೊಂಡಿದ್ದಾರೆ.

Priyanka Chopra
ನಟಿ ಪ್ರಿಯಾಂಕಾ ಚೋಪ್ರಾ

By

Published : Oct 14, 2021, 7:09 PM IST

ಹೈದರಾಬಾದ್: ಬಾಲಿವುಡ್​ ನಟಿ ಹಾಗೂ ಗ್ಲೋಬಲ್​ ಐಕಾನ್ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​ ಫೋಟೋಗಳಿಂದ ಪಡ್ಡೆಗಳನ್ನ ಬಿಸಿಯೇರಿಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ

ಸ್ಪೇನ್​ನಲ್ಲಿ ವೆಕೇಷನ್​ನಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಿರೀಸ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಮುಂಬರುವ ವೆಬ್ ಸರಣಿ ಸಿಟಾಡೆಲ್ ಚಿತ್ರೀಕರಣದಿಂದಾಗಿ ಸ್ಪೇನ್​ನಲ್ಲಿ ವೆಕೇಷನ್​ನಲ್ಲಿರುವ ಪಿಗ್ಗಿ ಅಲ್ಲಿ ನೀರಿನಲ್ಲಿ ಈಜುತ್ತಾ, ಸೂರ್ಯನ ಬಿಸಿಲಿಗೆ ಮೈಯೊಡ್ಡುತ್ತಾ ಆರಾಮಾಗಿ ಕಾಲ ಕಳೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್

ಪ್ರಿಯಾಂಕಾ ತನ್ನ ಸುಂದರ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಬಿಳಿ ಮತ್ತು ನೀಲಿ ಶಾರ್ಟ್ಸ್ ಮತ್ತು ಮ್ಯಾಚಿಂಗ್ ಟಾಪ್ ಧರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಮೊನೊಕಿನಿ ಧರಿಸಿದ್ದು, ಜೊತೆಗೆ ಕ್ಯಾಪ್​ ಸಹ ತೊಟ್ಟಿದ್ದಾರೆ. ಕ್ಯಾಪ್​ ಹಿಡಿದು ಸೂರ್ಯನತ್ತ ನೋಡುತ್ತಾ ಸಖತ್ ಸ್ಟೈಲಿಶ್​ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ತಾಯಿಯೊಂದಿಗೆ ನಟಿ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ತಮ್ಮ ರಜೆಯ ದಿನಗಳಲ್ಲಿ ತುಂಬಾ ಎಂಜಾಯ್ ಮಾಡುತ್ತಾರೆ. ಆಗಾಗ ಅಮ್ಮನನ್ನೂ ಜತೆಗೆ ಕರೆದುಕೊಂಡು ಹೋಗುತ್ತಾರೆ. ತಾಯಿ ಮಧು ಚೋಪ್ರಾ ಜತೆಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಬಿಕಿನಿಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ, ಆಗಾಗ ಇಂತಹ ಹಾಟ್​ ಫೋಟೋಗಳಿಂದಲೇ ಸಾಕಷ್ಟು ಟ್ರೋಲ್ ಆಗುತ್ತಿರುತ್ತಾರೆ.

ABOUT THE AUTHOR

...view details