ಕರ್ನಾಟಕ

karnataka

ETV Bharat / sitara

ಅಮೆಜಾನ್​ ಸ್ಟುಡಿಯೋಸ್​ನ ಥ್ರಿಲ್ಲರ್ ಸರಣಿಯಲ್ಲಿ ಆಕ್ಟ್​ ಮಾಡಲಿದ್ದಾರಂತೆ ಪ್ರಿಯಾಂಕಾ ಚೋಪ್ರಾ - Priyanka Chopra Richard Madden latest news

ತಮ್ಮ ಇನ್​​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಅವರು ಮಾಹಿತಿ ಹಂಚಿಕೊಂಡಿದ್ದು,  ರುಸ್ಸೋ ಬ್ರದರ್ಸ್ ಹಾಗೂ ಬಾಡಿಗಾರ್ಡ್ ಸ್ಟಾರ್​ಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ, Priyanka Chopra
ಪ್ರಿಯಾಂಕಾ ಚೋಪ್ರಾ

By

Published : Jan 15, 2020, 3:27 PM IST

ಮುಂಬೈ: ಅಮೆಜಾನ್ ಸ್ಟುಡಿಯೋಸ್ ಮುಂಬರುವ ಥ್ರಿಲ್ಲರ್ ಸರಣಿಯಾದ ಸಿಟಾಡೆಲ್ ನಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಬ್ರಿಟಿಷ್ ನಟ ರಿಚರ್ಡ್ ಮ್ಯಾಡೆನ್ ಜೊತೆ ನಟಿಸಲಿದ್ದಾರೆ.

ವಿವಿಧ ಸರಣಿಗಳನ್ನು ಚಿತ್ರೀಕರಿಸುವ ಉದ್ದೇಶದಿಂದ ಇಟಲಿ ಮತ್ತು ಭಾರತದಲ್ಲಿ ಈ ಸಂಬಂಧ ಸ್ಟುಡಿಯೋ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ಮತ್ತೊಂದು ನಿರ್ಮಾಣ ಸಂಸ್ಥೆಯನ್ನು ಮೆಕ್ಸಿಕೊದಲ್ಲಿ ಆರಂಭಿಸಲು ಯೋಜನೆ ತಯಾರು ಮಾಡಲಾಗಿದೆ.

37 ವರ್ಷದ ನಟ ರಿಚರ್ಡ್ ಸೀರಿಸ್​ನ ಬಹುಮುಖ್ಯ ಪಾತ್ರದಾರಿಯಾಗಿ ನಟನೆ ಮಾಡಲಿದ್ದಾರೆ. ಭಾವನಾತ್ಮಕ ಹಾಗೂ ಪತ್ತೇದಾರಿ ವಿಷಯವನ್ನು ಈ ಸರಣಿ ಹೊಂದಿರಲಿದೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಅವರು ಮಾಹಿತಿ ಹಂಚಿಕೊಂಡಿದ್ದು, ರುಸ್ಸೋ ಬ್ರದರ್ಸ್ ಹಾಗೂ ಬಾಡಿಗಾರ್ಡ್ ಸ್ಟಾರ್​ಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಜೋಶ್ ಅಪ್ಪೆಲ್‌ಬಾಮ್, ಆಂಡ್ರೆ ನೆಮೆಕ್, ಜೆಫ್ ಪಿಂಕ್ನರ್ ಬರೆದಿರುವ ಬರೆದಿರುವ ಈ ಸರಣಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

For All Latest Updates

TAGGED:

ABOUT THE AUTHOR

...view details