ಭಾರತೀಯ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಅಂತಾ ಖ್ಯಾತಿ ಹೊಂದಿರುವ ಏಕೈಕ ನಟ ಉಪೇಂದ್ರ. ಈ ಬುದ್ಧಿವಂತ ನಟನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಜೊತೆ ವೆರೈಟಿ ಕೇಕ್ ಕಟ್ ಮಾಡಿ, ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಈ ವರ್ಷ ಕೊರೊನಾ ಭೀತಿಯಿಂದಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಲ್ಲ.
ಉಪ್ಪಿ ಬರ್ತಡೇಗೆ ಪತ್ನಿ ಪ್ರಿಯಾಂಕ ಕೊಟ್ರು ಸ್ಪೆಷಲ್ ಗಿಫ್ಟ್ - ಪ್ರಿಯಾಂಕ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರ ಬಾಲ್ಯದ ಫೋಟೊ ಹಾಗು ನಿರ್ದೇಶನ ಮಾಡುತ್ತಿರುವ ಡಿಸೈನ್ ಮಾಡಿರುವ ಕೇಕ್ ಅನ್ನ ಉಪೇಂದ್ರ ಕೈಯಲ್ಲಿ ಕಟ್ ಮಾಡಿಸಿ ಪತ್ನಿ ಪ್ರಿಯಾಂಕ ಬರ್ತಡೇ ಸರ್ಪ್ರೈಸ್ ಕೊಟ್ಟಿದ್ದಾರೆ.
ಈ ವರ್ಷ ಸಾವಿರಾರು ಅಭಿಮಾನಿಗಳು ಇಲ್ಲದೆ ರಿಯಲ್ ಸ್ಟಾರ್ ತಮ್ಮ ಫ್ಯಾಮಿಲಿ ಜೊತೆ ಬರ್ತಡೇ ಆಚರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರಿಯಾಂಕಾ ಉಪೇಂದ್ರ ತಮ್ಮ ಪತಿಗೆ ಅರ್ಧ ಕೋಟಿ ಬೆಲೆ ಬಾಳುವ ಕಾರವೊಂದನ್ನ ಗಿಫ್ಟ್ ಆಗಿ ನೀಡಿದ್ದಾರೆ. ಆದರೆ ಇದೀಗ ಮತ್ತೊಂದು ನೆನಪಿನ ಉಡುಗೊರೆ ನೀಡಿದ್ದಾರೆ. ಉಪೇಂದ್ರ ಬಾಲ್ಯದ ಫೋಟೊ ಹಾಗು ನಿರ್ದೇಶನ ಮಾಡುತ್ತಿರುವ ರೀತಿ ಡಿಸೈನ್ ಮಾಡಿರುವ ಕೇಕ್ ಅನ್ನ ಉಪೇಂದ್ರ ಕೈಯಲ್ಲಿ ಕಟ್ ಮಾಡಿಸಿದ್ದಾರೆ.
ಪತ್ನಿ ಪ್ರಿಯಾಂಕ ಸ್ಪೆಷಲ್ ಅರೇಂಜ್ ಮೆಂಟ್ ನೋಡಿ ಸ್ವತಃ ಉಪೇಂದ್ರ ಕೂಡ ಫಿದಾ ಆಗಿದ್ದಾರೆ. ಪತ್ನಿ ಅರೇಂಜ್ ಮಾಡಿರೋ ಬಹಳ ಡಿಫ್ರೆಂಟ್ ಕೇಕ್ ಅನ್ನು ಉಪೇಂದ್ರ, ಪ್ರಿಯಾಂಕ ಉಪೇಂದ್ರ ಹಾಗು ಇಬ್ಬರು ಮಕ್ಕಳು ಸಮ್ಮುಖದಲ್ಲಿ ಕಟ್ ಮಾಡಿದ್ದಾರೆ.