ಕರ್ನಾಟಕ

karnataka

ETV Bharat / sitara

'ಡಿಟೆಕ್ಟಿವ್ ತೀಕ್ಷ್ಣ'ಳಾಗಿ ಬದಲಾದ ನಟಿ ಪ್ರಿಯಾಂಕಾ: ಪತ್ತೇದಾರಿ ಪಾತ್ರದಲ್ಲಿ ಉಪ್ಪಿ ಪತ್ನಿ - kannada new films list

ನಟಿ ಪ್ರಿಯಾಂಕಾ ಉಪೇಂದ್ರ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರದ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ಆದರೆ, ಪ್ರಿಯಾಂಕಾ ಅವರ ಪಾತ್ರ ರಿವೀಲ್ ಆಗಿದೆ. ತ್ರಿವಿಕ್ರಮ ರಘು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ 'ಡಿಟೆಕ್ಟಿವ್ ತೀಕ್ಷ್ಣ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

priyanaka-upendra-plays-a-detective-role-in-her-next
ನಟಿ ಪ್ರಿಯಾಂಕ ಉಪೇಂದ್ರ

By

Published : Aug 23, 2021, 3:30 PM IST

Updated : Aug 23, 2021, 4:26 PM IST

ತಮ್ಮ ಅಭಿಯನಯದಿಂದಲೇ ಸ್ಯಾಂಡಲ್​ವುಡ್​​ನಲ್ಲಿ ಸಾಕಷ್ಟು ಫ್ಯಾನ್ಸ್​ ಪಾಲೋಯಿಂಗ್​ ಹೊಂದಿರುವ ನಟಿ ಪ್ರಿಯಾಂಕಾ ಉಪೇಂದ್ರ, ಸದ್ಯ ವಿಭಿನ್ನವಾದ ಪಾತ್ರವೊಂದರ ಮೂಲಕ ಮತ್ತೆ ತೆರೆಮೇಲೆ ಬರಲು ಸಿದ್ಧರಾಗಿದ್ದಾರೆ. 'ದೇವಕಿ', 'ಉಗ್ರಾವತಾರ' ಮುಂತಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ, ಇದೀಗ ಹೆಸರಿಡಿದ ಇನ್ನೊಂದು ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ತ್ರಿವಿಕ್ರಮ ರಘು ನಿರ್ದೇಶನ ಮಾಡುತ್ತಿದ್ದು, ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ವರಮಹಾಲಕ್ಷ್ಮೀ ಹಬ್ಬದಂದು ಚಿತ್ರಕ್ಕೆ ಸಾಂಕೇತಿಕವಾಗಿ ಪೂಜೆ ಮಾಡಲಾಗಿದ್ದು, ಒಂದು ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್​​ನಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ಅಂದೇ ಸಿನಿಮಾದ ಶೀರ್ಷಿಕೆ ಸೇರಿದಂತೆ ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತದೆಯಂತೆ.

ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ತ್ರಿವಿಕ್ರಮ ರಘು, ಇಲ್ಲಿ ನಾಯಕಿ ಎಲ್ಲರ ಮನಸ್ಸನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಅಪರಾಧ ಚಟುವಟಿಕೆಗಳನ್ನು ಚಾಣಾಕ್ಷತನದಿಂದ ಕಂಡು ಹಿಡಿಯುತ್ತಾಳೆ. ವಿಭಿನ್ನ ರೀತಿಯ ದಿನಚರಿ ಈಕೆಯದ್ದಾಗಿರುತ್ತದೆ ಎಂದು ಪ್ರಿಯಾಂಕಾ ಪಾತ್ರದ ಬಗ್ಗೆ ವಿವರಿಸಿದ್ದಾರೆ.

ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ 'ಡಿಟೆಕ್ಟಿವ್ ತೀಕ್ಷ್ಣ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಚಿತ್ರಕ್ಕೆ ಮನು ದಾಸಪ್ಪ ಛಾಯಾಗ್ರಹಣ ಇದೆ. ಕನ್ನಡ ಅಷ್ಟೇ ಅಲ್ಲದೆ, ತೆಲುಗಿನಲ್ಲೂ ಸಹ ಈ ಸಿನಿಮಾ ಬಿಡುಗಡೆಯಾಗಲಿದೆ.

Last Updated : Aug 23, 2021, 4:26 PM IST

ABOUT THE AUTHOR

...view details