ಕರ್ನಾಟಕ

karnataka

ETV Bharat / sitara

ಇದೇ ತಿಂಗಳು ಬೆಳ್ಳಿ ತೆರೆಗೆ ಬರಲಿದೆ 'ನನ್ನ ಪ್ರಕಾರ'

'ನನ್ನ ಪ್ರಕಾರ’ ಚಿತ್ರದಲ್ಲಿ ಪ್ರಿಯಾಮಣಿ ವೈದ್ಯೆಯಾಗಿ ನಟಿಸಿದ್ದು, ಅವರ ಪಾತ್ರದ ಲುಕ್​​ಗಳು ರಿವೀಲ್ ಆಗಿವೆ.

ನನ್ನ ಪ್ರಕಾರ

By

Published : Aug 6, 2019, 6:50 PM IST

ಪ್ರಿಯಾಮಣಿ ಹಾಗೂ ಕಿಶೋರ್ ಮುಖ್ಯ ಭೂಮಿಕೆಯಲ್ಲಿರುವ 'ನನ್ನ ಪ್ರಕಾರ’ ಚಿತ್ರ ಆಗಸ್ಟ್ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಡಾಕ್ಟರ್​ ಗೆಟಪ್​ನಲ್ಲಿರುವ ಪ್ರಿಯಾಮಣಿ ಪೋಟೋಗಳು ರಿವೀಲ್ ಆಗಿವೆ. ಈ ಚಿತ್ರದಲ್ಲಿ ಕಿಶೋರ್ ಎಂದಿನಂತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಕಿಶೋರ್ ಜತೆ ಪ್ರಿಯಾಮಣಿ

ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಅರ್ಜುನ್‍ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ. ಮನ್ವರ್ಷಿ, ವಿನಯ್‍ ಬಾಲಾಜಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣವಿದೆ. ನನ್ನ ಪ್ರಕಾರ ಸಿನಿಮಾದಲ್ಲಿ ಕಿಶೋರ್, ಪ್ರಿಯಾಮಣಿ ಅಲ್ಲದೆ ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಮುಂತಾದವರು ಅಭಿನಯಿಸಿದ್ದಾರೆ.

ಪ್ರಿಯಾಮಣಿ
ವೈದ್ಯೆಳಾಗಿ ಪ್ರಿಯಾಮಣಿ
ಡಾಕ್ಟರ್​ ಗೆಟಪ್​​ನಲ್ಲಿ ಪ್ರಿಯಾಮಣಿ

ABOUT THE AUTHOR

...view details