ಕರ್ನಾಟಕ

karnataka

ETV Bharat / sitara

ತೆಲುಗು ಚಿತ್ರದ ಮೂಲಕ ಮತ್ತೆ ನಟನೆಗೆ ಪ್ರಿಯಾಮಣಿ ವಾಪಸ್​​! - undefined

ಪ್ರಿಯಾಮಣಿ ಮದುವೆಯಾದ ನಂತರ ಆ್ಯಕ್ಟಿಂಗ್​​​ನಿಂದ ದೂರ ಉಳಿದಿದ್ದರು. ಇದೀಗ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರೊಂದಿಗೆ ತೆಲುಗು ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಪ್ರಿಯಾ ಮತ್ತೆ ಆ್ಯಕ್ಟಿಂಗ್​​​ಗೆ ವಾಪಸಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಿಯಾಮಣಿ

By

Published : Feb 8, 2019, 1:05 PM IST

ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯ ಸೆನ್ಸೇಶನಲ್ ಹಿರೋಯಿನ್ ಎಂದೇ ಹೆಸರಾದ ಪ್ರಿಯಾಮಣಿ ತೆಲುಗಿನ 'ಎವರೇ ಅತಗಾಡು' ಸಿನಿಮಾ ಮೂಲಕ ಸಿನಿ ಇಂಡಸ್ಟ್ರಿಗೆ ಕಾಲಿಟ್ಟವರು. ಇದೀಗ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಂಚಭಾಷೆ ತಾರೆ ಎನಿಸಿಕೊಂಡಿದ್ದಾರೆ.

ಮುಸ್ತಫರಾಜ್​​​​, ಪ್ರಿಯಾಮಣಿ

ತಮ್ಮ ಗೆಳೆಯ ಮುಸ್ತಫ ರಾಜ್​​ ಜೊತೆ 2017 ಆಗಸ್ಟ್​​​​​​ನಲ್ಲಿ ಕೈ ಹಿಡಿದ ಪ್ರಿಯಾಮಣಿ ನಂತರ ನಟನೆಯಿಂದ ದೂರವಿದ್ದು ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದರು. ಸದ್ಯಕ್ಕೆ ಖಾಸಗಿ ಚಾನೆಲ್​​ವೊಂದರ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಪ್ರಿಯಾ ಜಡ್ಜ್ ಆಗಿದ್ದಾರೆ. ಆದರೆ ಇದೀಗ ಪ್ರಿಯಾ ಮತ್ತೆ ಆ್ಯಕ್ಟಿಂಗ್​​​ಗೆ ವಾಪಸಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಪ್ರಿಯಾಮಣಿ

ಪ್ರಿಯಾಮಣಿ ನಟಿಸುತ್ತಿರುವುದು ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್​​​ ದೇವ್ ಜೊತೆ ಎಂದು ತಿಳಿದುಬಂದಿದೆ. ರಿಜ್ವಾನ್ ಎಂಟರ್​​​ಟೈನ್ಮೆಂಟ್ ಬ್ಯಾನರ್ ಅಡಿ ಪುಲಿವಾಸು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಶೀಘ್ರ ಸಿನಿಮಾ ಸೆಟ್ಟೇರಲಿದೆ.

For All Latest Updates

TAGGED:

ABOUT THE AUTHOR

...view details