ಮಲಯಾಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋ ರಾತ್ರಿ ಸ್ಟಾರ್ ಆದ ನಟಿ. 'ಒರು ಅದಾರ್ ಲವ್ ಸ್ಟೋರಿ' ಚಿತ್ರದ ಒಂದೇ ಒಂದು ದೃಶ್ಯದಲ್ಲಿ ಹುಬ್ಬು ಹಾರಿಸಿ, ಕಣ್ಣು ಹೊಡೆಯುವ ಮೂಲಕ ಕಣ್ಸನ್ನೆ ಹುಡುಗಿ ಎಂದೇ ಹೆಸರಾದ ಪ್ರಿಯಾ ಪ್ರಕಾಶ್ ಈಗ ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಶೂಟಿಂಗ್ ವೇಳೆ ಆಯತಪ್ಪಿ ಬಿದ್ದ ವಿಡಿಯೋ ಹಂಚಿಕೊಂಡು ತಾನೇ ನಕ್ಕ ಕಣ್ಸನ್ನೆ ಹುಡುಗಿ
ತೆಲುಗು ನಟ ನಿತಿನ್ ಜೊತೆ 'ಚೆಕ್' ಚಿತ್ರೀಕರಣದ ವೇಳೆ ನಡೆದ ಫನ್ನಿ ವಿಡಿಯೋವೊಂದನ್ನು ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಚಿತ್ರೀಕರಣ ಪುನಾರಂಭಿಸಲಿದ್ದೇವೆ...ರಜನಿಕಾಂತ್
ತೆಲುಗಿನಲ್ಲಿ ನಿತಿನ್ ಜೊತೆ 'ಚೆಕ್' ಎಂಬ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ನಟಿಸಿದ್ದಾರೆ. ಈ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾ ಚಿತ್ರೀಕರಣದ ವೇಳೆ ಜರುಗಿದ ಫನ್ನಿ ವಿಡಿಯೋವೊಂದನ್ನು ಪ್ರಿಯಾ ಪ್ರಕಾಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಲಾಫಿಂಗ್ ಎಮೋಜಿಯೊಂದಿಗೆ ಹಂಚಿಕೊಂಡು ತಮ್ಮ ಪರಿಸ್ಥಿತಿ ನೋಡಿ ತಾವೇ ನಕ್ಕು ಸುಮ್ಮನಾಗಿದ್ದಾರೆ. ಈ ಸಿನಿಮಾದಲ್ಲಿ ನಿತಿನ್ ಹಿಂದಿನಿಂದ ಓಡಿಬರುವ ಪ್ರಿಯಾ,ಅವರ ಬೆನ್ನ ಮೇಲೆ ಏರುವ ದೃಶ್ಯವೊಂದಿದೆ. ಈ ಚಿತ್ರೀಕರಣದ ಸಮಯದಲ್ಲಿ ನಿತಿನ್ ಹಿಂದಿನಿಂದ ಓಡಿಬರುವ ಪ್ರಿಯಾ, ನಿತಿನ್ ಬೆನ್ನ ಮೇಲೆ ಏರುವ ಪ್ರಯತ್ನ ಮಾಡುತ್ತಾರೆ. ಆದರೆ ಆಯತಪ್ಪಿ ಕೆಳಗೆ ಬೀಳುತ್ತಾರೆ. ಕೂಡಲೇ ಚಿತ್ರತಂಡದ ಸದಸ್ಯರು ಓಡಿಬಂದು ಪ್ರಿಯಾ ಅವರನ್ನು ಮೇಲೆತ್ತುತ್ತಾರೆ. ಈ ವಿಡಿಯೋವನ್ನು ಅಲ್ಲೇ ಇದ್ದವರು ರೆಕಾರ್ಡ್ ಮಾಡಿದ್ದಾರೆ. ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡು "ನಾನು ಪ್ರತಿ ಬಾರಿ ನಂಬಿಕೆಯಿಟ್ಟು ಮೇಲೇರಲು ಯತ್ನಿಸುತ್ತಿದ್ದರೆ ಜೀವನ ನನ್ನನ್ನು ಹೀಗೆ ಕೆಳಗೆ ಬೀಳಿಸುತ್ತಲೇ ಇದೆ" ಎಂದು ಬರೆದುಕೊಂಡಿದ್ದಾರೆ. ನೆಟಿಜನ್ಸ್ ಕೂಡಾ ಈ ವಿಡಿಯೋ ನೋಡಿ ಲಾಫಿಂಗ್ ಎಮೋಜಿ ಹಾಕಿ ಕಮೆಂಟ್ ಮಾಡುತ್ತಿದ್ದಾರೆ.