ಕನ್ನಡ ಚಿತ್ರರಂಗದಲ್ಲಿ ಸದ್ಯ ಡ್ರಗ್ಸ್ ಬಿರುಗಾಳಿ ಬೀಸಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಅಲ್ಲದೆ ಚಿತ್ರರಂಗದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದ್ದು, ಕೆಲವರು ಸ್ಯಾಂಡಲ್ವುಡ್ನಲ್ಲಿ ಮಾದಕ ನಶೆ ಇರೋದು ಸತ್ಯ ಅಂದ್ರೆ, ಕೆಲವರು ನಮ್ಮಇಂಡಸ್ಟ್ರಿಗೆ ಮಾದಕ ನಂಟಿಲ್ಲ ಎಂದು ಹೇಳ್ತಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಿಂದಾಸ್ ಹುಡುಗಿ - ಸ್ಯಾಂಡಲ್ವುಡ್
ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಬಗ್ಗೆ ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ಕೇಳಿ ಬೇಸರ ಆಯ್ತು. ಯಾರೋ ಒಬ್ಬರಿಂದಾಗಿ ಇಡೀ ಇಂಡಸ್ಟ್ರೀಯನ್ನ ದೂರುವುದು ತಪ್ಪು ಎಂದಿದ್ದಾರೆ.
ಈಗ ಅದೇ ರೀತಿ ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಬಗ್ಗೆ ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ಕೇಳಿ ಬೇಸರ ಆಯ್ತು. ಯಾರೋ ಒಬ್ಬರಿಂದಾಗಿ ಇಡೀ ಇಂಡಸ್ಟ್ರೀಯನ್ನ ದೂರುವುದು ತಪ್ಪು. ಯಾರು ತಪ್ಪು ಮಾಡುತ್ತಾರೊ ಅವರನ್ನ ಗುರುತಿಸಿ ಶಿಕ್ಷಿಸಿ ಎಂದು ಪ್ರಿಯಾ ಹಾಸನ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ. ಡ್ರಗ್ಸ್ ಸ್ಪಪ್ಲೆ ಆಗದಂತೆ ನಿಲ್ಲಿಸಬೇಕು. ಮಕ್ಕಳ ಬಗ್ಗೆ ತಂದೆ ತಾಯಿ ಸರಿಯಾದ ಗಮನ ಹರಿಸ್ಬೇಕು. ಉತ್ತಮ ಸಮಾಜದ ಬೆಳವಣಿಗೆಗೆ ನಾವೆಲ್ಲ ಭಾಗಿಯಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.