ಈ ಬಾರಿಯ ಬಿಗ್ ಬಾಸ್ ತುಂಬಾನೇ ವಿಶೇಷ. ಯಾಕೆಂದರೆ ಪ್ರತಿ ಸಲವೂ ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತನೇ ಸಾಗಿದೆ. ಕಳೆದ ಬಾರಿ ನಾಮಿನೇಟ್ ಆಗಿದ್ದ ಚೈತ್ರಾ ಕೊಟ್ಟೂರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ದೊಡ್ಮನೆಯೊಳಗೆ ಕಾಲಿಟ್ಡಿದ್ದರು. ಇದೀಗ ಎಲಿಮಿನೇಟ್ ಆಗಿರುವ ಆರ್ ಜೆ ಪೃಥ್ವಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರ್ಜೆ ಪೃಥ್ವಿ - ಆರ್ಜೆ ಪೃಥ್ವಿ
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆಯೊಳಗೆ ಕಾಲಿಟ್ಟು ಕೆಲವೇ ವಾರಗಳ ನಂತ್ರ ಹೊರನಡೆದಿದ್ದ ಪೃಥ್ವಿ ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ರು.
ಇನ್ನು ಪೃಥ್ವಿ ಎಂಟ್ರಿ ಬಿಗ್ ಬಾಸ್ ಮನೆ ಸದಸ್ಯರಿಗೆ ಶಾಕ್ ನೀಡಿದ್ದಂತೂ ನಿಜ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಶಾಲೆ ಟಾಸ್ಕ್ ನಡೆಯುತ್ತಿದ್ದು, ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹಾಗೇ ಮನೆಯ ಸದಸ್ಯರು ಇರಬೇಕು. ಪ್ರಸ್ತುತ ಟಾಸ್ಕ್ನಲ್ಲಿ ಮನೆಯ ಓರ್ವ ಟೀಚರ್ ಆಗಿ ಬಂದರೆ ಉಳಿದವರು ವಿದ್ಯಾರ್ಥಿಗಳಾಗಿ ಇರಬೇಕೆಂಬುದು ಆಟದ ನಿಯಮ.
ಆದ್ರೆ, ಈ ಬಾರಿ ಪೃಥ್ವಿ ಬಿಗ್ ಬಾಸ್ ಮನೆಯ ಸದಸ್ಯನಾಗಿ ಎಂಟ್ರಿ ಕೊಟ್ಟಿಲ್ಲ. ಬದಲಾಗಿ ಅಲ್ಲಿರುವ ಸದಸ್ಯರಿಗೆ ಪಾಠ ಮಾಡುವ ಮೇಷ್ಟ್ರಾಗಿ ಬಂದಿದ್ದಾರೆ. ಶಂಕರಪ್ಪ ಮೇಷ್ಟ್ರಾಗಿ ದೊಡ್ಮನೆಯೊಳಗೆ ಬಂದಿದ್ದ ಆರ್ ಜೆ ಪೃಥ್ವಿ ಸದಸ್ಯರಿಗೆ ನಾನಾ ನಮೂನೆಯ ಆಟೋಟಗಳನ್ನು ನಡೆಸಿ, ಸಕತ್ ಮನರಂಜನೆಯನ್ನು ನೀಡಿ ಹೋಗಿದ್ದಾರೆ.
TAGGED:
ಆರ್ಜೆ ಪೃಥ್ವಿ