ಕರ್ನಾಟಕ

karnataka

ETV Bharat / sitara

ಇಂಗ್ಲೆಂಡ್​​​​ ಟ್ರಿಪ್​​​ ಮುಗಿಸಿ ಸ್ವದೇಶಕ್ಕೆ ಪ್ರಿನ್ಸ್​​​ ವಾಪಸ್​​​​​​: ಕೆಲಸಕ್ಕೆ ಹಾಜರ್​​​​​​​ - undefined

'ಮಹರ್ಷಿ' ಸಿನಿಮಾ ನಂತರ ಸ್ವಲ್ಪ ದಿನಗಳ ಕಾಲ ಸಮಯ ಪಡೆದು ಇಂಗ್ಲೆಂಡ್​​​ಗೆ ಹಾರಿದ್ದ ಪ್ರಿನ್ಸ್ ಇದೀಗ ಭಾರತಕ್ಕೆ ವಾಪಸಾಗಿದ್ದಾರೆ. ಅವರ ಅಭಿನಯದ 26ನೇ ಚಿತ್ರ 'ಸರಿಲೇರು ನೀಕೆವರು' ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.

ಮಹೇಶ್ ಬಾಬು

By

Published : Jun 18, 2019, 3:00 PM IST

ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 25ನೇ ಚಿತ್ರ 'ಮಹರ್ಷಿ' ಸೂಪರ್ ಸಕ್ಸಸ್ ಕಂಡು ಭಾರೀ ಲಾಭ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ 50 ದಿನಗಳನ್ನು ಪೂರ್ಣಗೊಳಿಸಲಿದೆ.

ಇನ್ನು ಮಹೇಶ್ ಬಾಬು ಕೆಲವು ದಿನಗಳ ಕಾಲ ಬ್ರೇಕ್ ಬಯಸಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇಂಗ್ಲೆಂಡ್ ತೆರಳಿದ್ದರು. ಅಲ್ಲಿ ಕ್ರಿಕೆಟ್ ಮ್ಯಾಚ್​​ ನೋಡಿ ಆನಂದಿಸಿದ್ದರು. ಇದೀಗ ಪ್ರಿನ್ಸ್ ಭಾರತಕ್ಕೆ ವಾಪಸಾಗಿದ್ದಾರೆ. ಅವರ ಅಭಿನಯದ 26ನೇ ಸಿನಿಮಾ ‘ಸರಿಲೇರು ನೀಕೆವರು‘ ಚಿತ್ರಕ್ಕಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಚಿತ್ರದ ನಾಲ್ವರು ನಿರ್ಮಾಪಕರಲ್ಲಿ ಮಹೇಶ್ ಬಾಬು ಕೂಡಾ ಒಬ್ಬರಾಗಿದ್ದು, ಸ್ವತಃ ಮಹೇಶ್ ಪ್ರೀ ಪ್ರೊಡಕ್ಷನ್​​​ ಕೆಲಸವನ್ನು ಮುಂದೆ ನಿಂತು ಮಾಡಿಸುತ್ತಿದ್ದಾರೆ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಕಾಶ್ಮೀರ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಕೂಡಾ ಸಿನಿಮಾ ಚಿತ್ರೀಕರಣ ಜರುಗಲಿದೆಯಂತೆ. ಈ ಸಿನಿಮಾಗಾಗಿ ಮಹೇಶ್ ಮತ್ತೆ ಗೆಟಪ್ ಬದಲಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅನಿಲ್ ರವಿಪುಡಿ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮಹೇಶ್​​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ವಿಜಯ ಶಾಂತಿ ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ದೇವಿಶ್ರೀ ಪ್ರಸಾದ್ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details