ಕರ್ನಾಟಕ

karnataka

ETV Bharat / sitara

ಸೈರಾ ಸಿನಿಮಾ ಕನ್ನಡ ಅವತರಣಿಕೆಯೂ ಸಕ್ಸಸ್​: ಕನ್ನಡಿಗರಿಗೆ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್ - press meet conducted by syera narasimha reddy movie team

ಬಹು ತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಸೈರಾ ನರಸಿಂಹ ರೆಡ್ಡಿ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಕನ್ನಡದಲ್ಲೂ ಡಬ್ಬಿಂಗ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಈ ಹಿಂದೆ ಕನ್ನಡದಲ್ಲಿ ಡಬ್ ಆಗಿದ್ದ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದ ಕನ್ನಡ ಸಿನಿ ಪ್ರೀಯರು ಸೈರಾ ಸಿನಿಮಾವನ್ನು ಬಾಚಿ ಒಪ್ಪಿಕೊಂಡಿದ್ದಾರೆ. ಬರೋಬ್ಬರಿ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರ ತಂಡ ಬೆಂಗಳೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿ ಸಂತಸ ಹಂಚಿಕೊಂಡರು

ಬೆಂಗಳೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿದ ಸೈರಾ ತಂಡ

By

Published : Oct 12, 2019, 10:45 AM IST

ಬೆಂಗಳೂರು : ಬಹು ತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಸೈರಾ ನರಸಿಂಹ ರೆಡ್ಡಿ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಕನ್ನಡದಲ್ಲೂ ಡಬ್ಬಿಂಗ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಈ ಹಿಂದೆ ಕನ್ನಡದಲ್ಲಿ ಡಬ್ ಆಗಿದ್ದ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದ ಕನ್ನಡ ಸಿನಿ ಪ್ರೀಯರು ಸೈರಾ ಸಿನಿಮಾವನ್ನು ಬಾಚಿ ಒಪ್ಪಿಕೊಂಡಿದ್ದಾರೆ. ಬರೋಬ್ಬರಿ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರ ತಂಡ ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಸಂತಸ ಹಂಚಿಕೊಂಡರು.

ಬೆಂಗಳೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿದ ಸೈರಾ ತಂಡ

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸುರೇಂದರ್ ರೆಡ್ಡಿ ಸೈರಾ ಚಿತ್ರವನ್ನು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದ ಕನ್ನಡಿಗರಿಗೆ ಹಾಗೂ ಕಿಚ್ಚ ಸುದೀಪ್​ಗೆ ಧನ್ಯವಾದ ಅರ್ಪಿಸಿದರು.

ವಿತರಕ‌ ಧೀರಜ್ ಮಾತನಾಡಿ ಸೈರಾ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸೈರಾ ಪ್ರದರ್ಶನ ಕಾಣ್ತಿದೆ. ಹಾಗೂ ಸುಮಾರು ೧೦೦ ಚಿತ್ರಮಂದಿರಗಳಲ್ಲಿ ಕನ್ನಡದ ಡಬ್ ಆಗಿರುವ ಸೈರಾ ಚಿತ್ರ ಪ್ರದಶನ ಕಾಣ್ತಿದೆ, ಕನ್ನಡದಲ್ಲಿ ಡಬ್ ಆಗಿರುವ ಸೈರಾ ಚಿತ್ರ ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಿರುವುದು ಮತ್ತೊಂದು ಹೆಮ್ಮೆಯ ವಿಷಯ .ಈ ಹಿಂದೆ ಹಾಗೂ ತೆಲುಗಿನಲ್ಲಿ ಡಬ್ ಆಗಿರುವ ಚಿತ್ರಗಳು ಮಾತ್ರ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಆದರೆ ಈಗ ಸೈರಾ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ ಎಂದರು.


ಇನ್ನು ಕಿಚ್ಚ ಸುದೀಪ್ ಮಾತನಾಡಿ ಇಂಥಹ ಒಂದು ದೊಡ್ಡ ಚಿತ್ರದಲ್ಲಿ ನಾನು ಒಂದು ಭಾಗ ಆಗಿರೋದು ತುಂಬಾ ಖುಷಿಯ ಸಂಗತಿ, ಚಿರಂಜೀವಿ ಹಾಗೂ ನಿರ್ದೇಶಕ ಸುರೇಂದರ್ ರೆಡ್ಡಿ ಅವರ ಜೊತೆ ಕೆಲಸ ಮಾಡಿಲು ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ, ಬೇರೆ ಭಾಷೆಯ ಸಿನಿಮಾಗಳಲ್ಲಿ ನಾನು ನಟಿಸಿದರು ನನ್ನನ್ನು ನೋಡೊಕೆ ಚಿತ್ರಮಂದಿರಗಳಿಗೆ ಜನ ಬರ್ತಾರೆ ಅಂದ್ರೆ ಅದಕ್ಕಿತ ಖುಷಿ ಮತ್ತೊಂದಿಲ್ಲ, ಸೈರಾ ಚಿತ್ರದ ಶೂಟಿಂಗ್ ವೇಳೆ ದೊಡ್ಡ ಸಿನಿಮಾ ಮಾಡ್ತಿದ್ದಾರೆ ಎಂಬುದು ಗೊತ್ತಿತ್ತು, ಅದ್ರೆ ಚಿತ್ರದ ಟ್ರೈಲರ್ ನೋಡಿದ ಮೇಲೆ ನನಗೆ ಗೊತ್ತಾಗಿದ್ದು ಸಿನೆಮಾ ಎಷ್ಟು ಅದ್ಬುತವಾಗಿ ಮೂಡಿ ಬಂದಿದೆ ಎಂದು ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕಿಚ್ಚ ಸುದೀಪ್​. ನಿರ್ದೇಶಕ ಸುರೇಂದರ್ ರೆಡ್ಡಿ. ವಿತರಕ ಧೀರಜ್ ಮತ್ತು ಮೋಹನ್ ದಾಸ್ ಉಪಸ್ಥಿತರಿದ್ದರು.

ABOUT THE AUTHOR

...view details