ಚಿತ್ರಾಲಯ ಪ್ರೊಡಕ್ಷನ್ ಬ್ಯಾನರ್ ಅಡಿ ಶ್ರುತಿ ನಾಯ್ಡು ನಿರ್ಮಿಸಿರುವ 'ಪ್ರೀಮಿಯರ್ ಪದ್ಮಿನಿ' ಹಾಫ್ ಸೆಂಚುರಿ ಬಾರಿಸಿದೆ. ಹೌದು, ಏಪ್ರಿಲ್ 26 ರಂದು ಬಿಡುಗಡೆಯಾಗಿದ್ದ ಸಿನಿಮಾ ಇಂದಿಗೆ ಯಶಸ್ವಿ 50 ದಿನಗಳನ್ನು ಪೂರೈಸಿದೆ.
50 ದಿನ ಪೂರೈಸಿದ 'ಪ್ರೀಮಿಯರ್ ಪದ್ಮಿನಿ'! - undefined
ನಟ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾ 50 ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ದಾಪುಗಾಲಿಟ್ಟಿದೆ. ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದ ಶ್ರುತಿ ನಾಯ್ಡು ಈ ಸಿನಿಮಾದ ನಿರ್ಮಾಪಕಿ.
![50 ದಿನ ಪೂರೈಸಿದ 'ಪ್ರೀಮಿಯರ್ ಪದ್ಮಿನಿ'!](https://etvbharatimages.akamaized.net/etvbharat/prod-images/768-512-3559243-thumbnail-3x2-padmini.jpg)
ಇಷ್ಟು ದಿನ ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದ ನಟಿ, ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು 'ಪ್ರೀಮಿಯರ್ ಪದ್ಮಿನಿ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹಿರಿತೆರೆಗೂ ಕಾಲಿರಿಸಿದ್ದಾರೆ. ಈ ಸಿನಿಮಾ ಕೂಡಾ ಈ ವರ್ಷದ ಆವರೇಜ್ ಹಿಟ್ ಲಿಸ್ಟ್ನಲ್ಲಿ ಸೇರುತ್ತಿದೆ. ಶ್ರುತಿ ನಾಯ್ಡು ಪ್ರಕಾರ ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರದ ಗಳಿಕೆ ಚೆನ್ನಾಗಿದೆಯಂತೆ. ಇದೇ ಖುಷಿಯಲ್ಲಿ ಶ್ರುತಿ ನಾಯ್ಡು ಮತ್ತೊಂದು ಸಿನಿಮಾ ಮಾಡುವ ಮುನ್ಸೂಚನೆ ನೀಡಿದ್ದಾರೆ. 'ಪ್ರೀಮಿಯರ್ ಪದ್ಮಿನಿ' ಮನಸ್ಸುಗಳ ತಾಕಲಾಟದ ಸಿನಿಮಾ. ಇದು ರಮೇಶ್ ಇಂದಿರ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಕೂಡಾ. ಇವರೂ ಕೂಡಾ ಕಿರುತೆರೆಯಲ್ಲಿ ಹೆಸರುವಾಸಿ ಆದವರು.
ನವರಸ ನಾಯಕ ಜಗ್ಗೇಶ್ ತಮ್ಮ ಎಂದಿನ ಹಾಸ್ಯ ಶೈಲಿ ಬಿಟ್ಟು ಮನಸ್ಸು ತಟ್ಟುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇದು. ಯುವ ನಟ ಪ್ರಮೋದ್ಗೆ ಈ ಸಿನಿಮಾದಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 'ಗೀತಾ ಬ್ಯಾಂಗಲ್ ಸ್ಟೋರ್' ಆದ ನಂತರ ಪ್ರಮೋದ್ ನಾಯಕನಾಗಿ ಅಭಿನಯಿಸಿದ ಸಿನಿಮಾ ಇದು. ಪ್ರಮೋದ್ ಈಗ 'ಮತ್ತೆ ಉದ್ಭವ' ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಣ್ಣಯ್ಯ ಚಿತ್ರದಲ್ಲಿ ರವಿಚಂದ್ರನ್ ಜೋಡಿಯಾಗಿ ನಟಿಸಿದ್ದ ಮಧುಬಾಲ, ಸುಧಾರಾಣಿ, ಹಿತ ಚಂದ್ರಶೇಖರ್, ಕೃತಿಕ, ವಿವೇಕ್ ಸಿಂಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ನಾಯ್ಡು ಚಿತ್ರಾಲಯದ ಮೊದಲ ನಿರ್ಮಾಣಕ್ಕೆ ಅರ್ಜುನ್ ಜನ್ಯ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಒದಗಿಸಿದ್ದಾರೆ.