ಕರ್ನಾಟಕ

karnataka

ETV Bharat / sitara

ಮುಗಿಲ್​ಪೇಟೆಯಲ್ಲೂ ‘ಪ್ರೇಮಲೋಕ’.. ಮನು ಸಿನಿಮಾದಲ್ಲಿ ರವಿಮಾಮನ ಮುತ್ತಿನ ಪಾಠ..! - Premaloka iconic scen

1987ರಲ್ಲಿ ತೆರೆಗೆ ಬಂದಿದ್ದ ಪ್ರೇಮಲೋಕ ಸ್ಯಾಂಡಲ್​​ವುಡ್​ನ ಸಕ್ಸಸ್​ ಸಿನಿಮಾಗಳ ಸಾಲಿನ ಬಹುಮುಖ್ಯ ಸಿನಿಮಾ. ಇದೇ ಸಿನಿಮಾದಲ್ಲಿ ರವಿಚಂದ್ರನ್ ಹುಡುಗಿಯರ ಬಳಿ ಮುತ್ತು ಕೇಳೋದು ಹೇಗೆ ಅಂತ ಹೇಳಿಕೊಡುವ ದೃಶ್ಯವೊಂದಿದೆ. ಇದೇ ದೃಶ್ಯ ಈಗ ಪುತ್ರನ ಮುಗಿಲ್​ಪೇಟೆಯಲ್ಲೂ ಮತ್ತೆ ಮರುಕಳಿಸಿದೆ.

Mugilpete movie
ಮುಗಿಲ್​ಪೇಟೆ ಸಿನಿಮಾ

By

Published : Oct 25, 2021, 5:04 PM IST

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಟನೆಯ ‘ಮುಗಿಲ್​​​ಪೇಟೆ’ ಚಿತ್ರ ಟೀಸರ್ ಹಾಡುಗಳಿಂದ ಸದ್ದು ಮಾಡ್ತಿದೆ. ಕಳೆದ ದಸರಾದಂದು ಹಾಡೊಂದನ್ನ ಬಿಡುಗಡೆ ಮಾಡಿದ್ದ ಚಿತ್ರತಂಡ ಅಭಿಮಾನಿಗಳಿಗೆ ಸರ್​​ಪ್ರೈಸ್​​ ನೀಡಿತ್ತು.

ಇದೀಗ ಚಿತ್ರದಲ್ಲಿ ರವಿಚಂದ್ರನ್ ನಟನೆಯ ಪ್ರೇಮಲೋಕ ಚಿತ್ರದ ಸೀನ್​ವೊಂದು ರಿ ಕ್ರಿಯೇಟ್ ಮಾಡಲಾಗಿದೆ ಎಂಬ ಸುಳಿವು ಸಿಕ್ಕಿದೆ. ಪ್ರೇಮಲೋಕ ಚಿತ್ರದ ಐಕಾನಿಕ್ ದೃಶ್ಯವನ್ನ ಮುಗಿಲ್​ಪೇಟೆಯಲ್ಲಿ ಮರುಸೃಷ್ಟಿಸಿದ್ದಾರೆ.

ಈ ಬಗ್ಗೆ ಟ್ವೀಟ್​​ನಲ್ಲಿ ವಿಡಿಯೋವನ್ನ ಹಂಚಿಕೊಂಡಿರುವ ರವಿಚಂದ್ರನ್ ಪುತ್ರ ಮನು, ಮುಗಿಲ್​​ಪೇಟೆಗೆ 'ಪ್ರೇಮಲೋಕ'ದ ಐಕಾನಿಕ್​ ದೃಶ್ಯವನ್ನು ಮರುಸೃಷ್ಟಿಸಿದ್ದೇವೆ. ದಶಕದ ಹಿಂದೆ ಅಪ್ಪ ಮಾಡಿದ್ದ ದೃಶ್ಯವನ್ನ ಮಾಡಲು ಪ್ರಯತ್ನಿಸಿದ್ದೇನೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾದಿದ್ದೇನೆ ಎಂದಿದ್ದಾರೆ.

ಚಿತ್ರದಲ್ಲಿ ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ. ದೀಪಾವಳಿಯಲ್ಲಿ ಚಿತ್ರ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ:45 ವಯಸ್ಸಿಗೆ ಕಾಲಿಟ್ಟ ಶೆರಾವತ್​.. ಇದು ರೀಮಾ ಲಾಂಬಾ, ಮಲ್ಲಿಕಾ ಆದ ಇಂಟ್ರೆಸ್ಟಿಂಗ್​​ ಕಹಾನಿ

ABOUT THE AUTHOR

...view details