ಕರ್ನಾಟಕ

karnataka

ETV Bharat / sitara

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಾಯಿಯಾದ ನಟಿ ಪ್ರೀತಿ ಜಿಂಟಾ - Surrogacy

ಬಾಲಿವುಡ್​ನ ಸ್ಟಾರ್ ಹೀರೋಯಿನ್ ಪ್ರೀತಿ ಜಿಂಟಾ (Actor Preity Zinta) ಬಾಡಿಗೆ ತಾಯ್ತನದ (Surrogacy) ಮೂಲಕ ಅವಳಿ ಮಕ್ಕಳ ಅಮ್ಮನಾಗಿದ್ದಾರೆ.

Preity Zinta And Gene Goodenough
Preity Zinta And Gene Goodenough

By

Published : Nov 18, 2021, 4:08 PM IST

ಹೈದರಾಬಾದ್​:ಬಾಡಿಗೆ ತಾಯ್ತನದ ಮೂಲಕ ಬಾಲಿವುಡ್​ನ ಖ್ಯಾತ ನಟಿ ಪ್ರೀತಿ ಜಿಂಟಾ (Preity Zinta) ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರೀತಿ ಜಿಂಟಾ ಹಾಗೂ ಅವರ ಪತಿ ಜೀನ್​ ಗುಡ್‌ಎನಾಫ್ (Gene Goodenough Preity Zinta welcomes twins) ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಮಕ್ಕಳಿಗೆ ಜೈ ಹಾಗೂ ಜಿಯಾ (Jai and Gia) ಎಂದು ನಾಮಕರಣ ಮಾಡಿದ್ದಾರೆ.

ಇದನ್ನೂ ಓದಿ:ಲೈಂಗಿಕ ಕೆಲಸಕ್ಕಾಗಿ ಮಗಳನ್ನು ಪೀಡಿಸಿದ ತಾಯಿಗೆ 10 ವರ್ಷ ಕಾರಾಗೃಹ ಶಿಕ್ಷೆ

'ಎಲ್ಲರಿಗೂ ನಮಸ್ಕಾರ. ಅತ್ಯಂತ ಸಂತೋಷದ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಜೀನ್ ಹಾಗೂ ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದೇವೆ. ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ. ನಮ್ಮ ಹೃದಯ ಕೃತಜ್ಞತೆ ಹಾಗೂ ಪ್ರೀತಿಯಿಂದ ಕೂಡಿದೆ. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ' ಎಂದು ಪ್ರೀತಿ ಜಿಂಟಾ ಬರೆದುಕೊಂಡಿದ್ದಾರೆ.

2016ರಲ್ಲಿ ಅಮೆರಿಕಾದ ಜೀನ್ ಜೊತೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ABOUT THE AUTHOR

...view details