ಖ್ಯಾತ ಗಾಯಕ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು ಅವರ ಆರೋಗ್ಯ ದಿನೇ ದಿನೆ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ವೈದ್ಯರು ಹಾಗೂ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಎಸ್ಪಿಬಿ ಪುತ್ರ ಎಸ್.ಪಿ. ಚರಣ್ ಹೇಳಿದ್ದಾರೆ.
ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಶೀಘ್ರ ಚೇತರಿಕೆಗೆ ಕಲಾವಿದರ ಸಂಘದಲ್ಲಿ ಪ್ರಾರ್ಥನೆ - Prayer for SPB health
ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಅವರು ಶೀಘ್ರ ಮೊದಲಿನಂತಾಗಿ ಆಸ್ಪತ್ರೆಯಿಂದ ಗುಣಮುಖರಾಗಲೆಂದು ಪ್ರಾರ್ಥಿಸಲು ಇಂದು ಸಂಜೆ ಬೆಂಗಳೂರಿನ ಕಲಾವಿದರ ಭವನದಲ್ಲಿ ಕಲಾವಿದರು, ನಿರ್ಮಾಪಕರು, ನಿರ್ದೇಶಕರೆಲ್ಲಾ ಒಟ್ಟು ಸೇರುತ್ತಿದ್ದಾರೆ.
ಎಸ್ಪಿಬಿ ಶೀಘ್ರ ಗುಣಮುಖರಾಗಲೆಂದು ಇಂದಿಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇಂದು ಸಂಜೆ ಬೆಂಗಳೂರಿನ ಕಲಾವಿದರ ಭವನದಲ್ಲಿ ಕೂಡಾ ಎಸ್ಪಿಬಿ ಅವರ ಆರೋಗ್ಯ ಶೀಘ್ರ ಸುಧಾರಿಸಿ ಅವರು ಮೊದಲಿನಂತಾಗಲಿ ಎಂದು ಪ್ರಾರ್ಥನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಾ. ರಾಜ್ಕುಮಾರ್ ಭವನ, ಅಂಬರೀಶ್ ಸಭಾಂಗಣದಲ್ಲಿ ಇಂದು ಸಂಜೆ 4 ಗಂಟೆಗೆ ಪ್ರಾರ್ಥನೆ ನಡೆಯಲಿದೆ. ಸಂಘದ ಕಾರ್ಯದರ್ಶಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಖಚಾಂಚಿ ದೊಡ್ಡಣ್ಣ ಸೇರಿದಂತೆ ಈ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಚಿತ್ರರಂಗದ ಖ್ಯಾತ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.