ಕರ್ನಾಟಕ

karnataka

ETV Bharat / sitara

'ಡ್ರೋನ್'​​ ಹಾರಿಸೋಕೆ ರೆಡಿಯಾದ ಪ್ರಥಮ್​​: ಕಥೆ ಯಾರ ಬಗ್ಗೆ ಗೊತ್ತಾ? - ಬಿಗ್​ ಬಾಸ್​​ ಪ್ರಥಮ್​​

ಪ್ರಥಮ್​ ಇದೀಗ ಡ್ರೋನ್ ಪ್ರತಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಸ್ವತಃ ಪ್ರಥಮ್​​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಡ್ರೋನ್​​ ಹಾರಿಸೋಕೆ ರೆಡಿಯಾದ ಪ್ರಥಮ್​​ : ಕಥೆ ಯಾರ ಬಗ್ಗೆ ಗೊತ್ತಾ?
ಡ್ರೋನ್​​ ಹಾರಿಸೋಕೆ ರೆಡಿಯಾದ ಪ್ರಥಮ್​​ : ಕಥೆ ಯಾರ ಬಗ್ಗೆ ಗೊತ್ತಾ?ಡ್ರೋನ್​​ ಹಾರಿಸೋಕೆ ರೆಡಿಯಾದ ಪ್ರಥಮ್​​ : ಕಥೆ ಯಾರ ಬಗ್ಗೆ ಗೊತ್ತಾ?

By

Published : Feb 4, 2021, 7:49 PM IST

ಬಿಗ್‌ ಬಾಸ್ ಖ್ಯಾತಿಯ ಪ್ರಥಮ್ ತಮ್ಮ ವಿಶೇಷ ಮಾತುಗಾರಿಕೆ, ಹಾವಭಾವದಿಂದ ಗುರುತಿಸಿಕೊಂಡಿದ್ದಾರೆ. ಇವರು MLA ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಹಾಸ್ಯಮಯ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.

ಪ್ರಥಮ್

ಹೌದು, ಪ್ರಥಮ್​ ಇದೀಗ ಡ್ರೋನ್ ಪ್ರತಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಸ್ವತಃ ಪ್ರಥಮ್​​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಡ್ರೋನ್ ಮಾಡುವುದಾಗಿ ಹೇಳಿ ಎಲ್ಲರಿಗೂ ಕಾಗೆ ಹಾರಿಸಿದ್ದ ಪ್ರತಾಪ್ ಬಗ್ಗೆ ಸಿನಿಮಾವೊಂದು ನಿರ್ಮಾಣವಾಗುತ್ತಿದ್ದು, ಈ ಚಿತ್ರದಲ್ಲಿ ಪ್ರಥಮ್​​​​ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಖ್ಯಾತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದಿರುವ ಪ್ರಥಮ್, ಚಿತ್ರಕ್ಕಾಗಿ ಸುಮಾರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಥಮ್​​, ಪ್ರಖ್ಯಾತ ನಿರ್ದೇಶಕರು ನಿರ್ದೇಶಿಸಲಿರುವ ಸಿನಿಮಾ! ಗೌರಿಗಣೇಶ, ಉಂಡು ಹೋದ ಕೊಂಡು ಹೋದ! ಯಾರಿಗೂ ಹೇಳ್ಬೇಡಿ ಶೈಲಿಯ ಸಿನಿಮಾ! ನಿಮ್ಗೆ ಡ್ರೋನ್​​​ ಅಂದ್ರೆ ಗೊತ್ತಲ್ವಾ? ನಿಮ್ಮ ತಲೆಯಲ್ಲಿ ಏನ್ ಬಂತೋ ಅದೇ ನಿಜ! ಅದೇ ಸಿನಿಮಾ ಆಗ್ತಿದೆ! ಲೀಗಲ್​​ ಟರ್ಮ್ಸ್​​​ ಪ್ರೊಸಿಡಿಂಗ್ಸ್​​​ನಲ್ಲಿದೆ! ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆಯಾಗದಂತೆ ನಿಮ್ಮನ್ನು ನಗಿಸೋ ಜೊತೆಗೆ ಕಾಡುವ ಸಿನಿಮಾ ಎಂದು ಬರೆದಿದ್ದಾರೆ.

ABOUT THE AUTHOR

...view details