ಕರ್ನಾಟಕ

karnataka

ETV Bharat / sitara

ಡ್ರಗ್ಸ್ ಪೆಡ್ಲರ್ ಜತೆ ಪ್ರಶಾಂತ್ ಸಂಬರಗಿ ನಂಟು ಹೊಂದಿದ್ದಾನೆ.. ಸಾ ರಾ ಗೋವಿಂದ್​​ - ಸ್ಯಾಂಡಲ್​ವುಡ್​​ ಡ್ರಗ್ಸ್​​ ದಂಧೆ

ಪ್ರಶಾಂತ್ ಸಂಬರಗಿಗೆ ರಾಜಕೀಯದ ಹುಚ್ಚು ಹಿಡಿದಿದೆ‌. ಈ ಕಾರಣಕ್ಕೆ ಹೀಗೆಲ್ಲಾ ಮಾಡ್ತಿದ್ದಾನೆ. ಹಾಗೇ ನನ್ನ ಮೇಲೆ ಮಾಡಿರುವ ಆರೋಪಗಳನ್ನ ಸಾಬೀತು ಮಾಡಿದ್ರೆ, ನಾನು ಸಿನಿಮಾ ಇಂಡಸ್ಟ್ರಿ ಬಿಡುತ್ತೇನೆ..

prashanth-sambaragi-had-relation-with-drug-peddler
ಸಾ ರಾ ಗೋವಿಂದ್​​​​

By

Published : Sep 5, 2020, 9:52 PM IST

ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್ ನಶೆಯ ನಂಟು ಜೋರಾಗಿದೆ ಅಂತಾ ಹೇಳಿಕೆ ನೀಡಿ ಕಳೆದ ಒಂದು ವಾರದಿಂದ ಪ್ರಶಾಂತ್ ಸಂಬರಗಿ ಸುದ್ದಿಯಲ್ಲಿದ್ದಾರೆ. ಜೊತೆಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್ ರೋಲ್‌ ಕಾಲ್ ಗಿರಾಕಿ ಅಂತಾ ಆರೋಪಿಸಿದ್ರು.

ಸಂಬರಗಿ ಅವರ ಈ ಆರೋಪಕ್ಕೆ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದ್ ತಿರುಗೇಟು ನೀಡಿದ್ದಾರೆ. ಡ್ರಗ್ಸ್ ಪೆಡ್ಲರ್ ರಾಹುಲ್ ಜೊತೆ ನಂಟು ಹೊಂದಿರುವ ಪ್ರಶಾಂತ್ ಸಂಬರಗಿಯನ್ನ ಕೂಡಲೇ ಪೊಲೀಸ್ ಅಧಿಕಾರಿಗಳು ಬಂಧಿಸಬೇಕು ಅಂತಾ ಆಗ್ರಹಿಸಿದರು.

ಪ್ರಶಾಂತ್ ಸಂಬರಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಾ ರಾ ಗೋವಿಂದ್​​​​

ಪ್ರಶಾಂತ್ ಸಂಬರಗಿಗೆ ರಾಜಕೀಯದ ಹುಚ್ಚು ಹಿಡಿದಿದೆ‌. ಈ ಕಾರಣಕ್ಕೆ ಹೀಗೆಲ್ಲಾ ಮಾಡ್ತಿದ್ದಾನೆ. ಹಾಗೇ ನನ್ನ ಮೇಲೆ ಮಾಡಿರುವ ಆರೋಪಗಳನ್ನ ಸಾಬೀತು ಮಾಡಿದ್ರೆ, ನಾನು ಸಿನಿಮಾ ಇಂಡಸ್ಟ್ರಿ ಬಿಡುತ್ತೇನೆ, ಇಲ್ಲ ಆರೋಪಗಳು ಸುಳ್ಳುದಾರೆ ನೀನು ಕರ್ನಾಟಕ ಬಿಡಬೇಕು ಅಂತಾ ಸಾ ರಾ ಗೋವಿಂದ್, ಪ್ರಶಾಂತ್ ಸಂಬರಗಿಗೆ ಸವಾಲ್ ಹಾಕಿದರು.

ಬಾಹುಬಲಿ-2 ಸಿನಿಮಾ ರಿಲೀಸ್ ಟೈಮ್‌ನಲ್ಲಿ ನಿರ್ಮಾಪಕರಿಂದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಾ ರಾ ಕೆಂಡಾಮಂಡಲರಾಗಿ ಖಡಕ್ ಎಚ್ಚರಿಕೆ ನೀಡಿದರು.

ABOUT THE AUTHOR

...view details