ಕೆಜಿಎಫ್ ಸಿನಿಮಾ ಮೂಲಕ ವಿಶ್ವದ ಗಮನ ಸೆಳೆದ ಕ್ರಿಯೇಟಿವ್ ನಿರ್ದೇಶಕ ಪ್ರಶಾಂತ್ ನೀಲ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ನೀಲ್ ಬರ್ತಡೇಯನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಸರಳವಾಗಿ ಪ್ರಶಾಂತ್ ನೀಲ್ ನಿವಾಸದಲ್ಲಿ ಸೆಲೆಬ್ರೆಟ್ ಮಾಡಿದ್ದಾರೆ.
ಉಗ್ರಂ ಸಿನಿಮಾ ಮೂಲಕ ಶ್ರೀಮುರಳಿಗೆ ಮರುಜನ್ಮ ನೀಡಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಆದ್ದರಿಂದ ಆ ಅಭಿಮಾನ ಹಾಗು ಸಂಬಂಧಿಯಾಗಿರುವ ಕಾರಣ ಶ್ರೀಮುರಳಿ ಕೆಜಿಎಫ್ ಚಿತ್ರದ ಮಾಂತ್ರಿಕನ ಹುಟ್ಟುಹಬ್ಬವನ್ನ ಅಚರಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಮರಾಮ್ಯಾನ್ ಭುವನ್ ಗೌಡ, ನಟ ತಿಲಕ್, ದಿಯಾ ಚಿತ್ರದ ನಿರ್ಮಾಪಕ ಚೈತನ್ಯ ಹಾಗು ಪ್ರಶಾಂತ್ ನೀಲ್ ಪತ್ನಿ ಲಿಕಿತಾ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.